ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ನಾವೆಲ್ಲರೂ ಪಾಠ ಕಲಿಯಬೇಕು: ಗೈ ಫರ್ಗೆಟ್

ಫ್ರೆಂಚ್ ಓಪನ್ ಸಂಘಟಕರು ಪ್ರತಿ ಹಂತದಲ್ಲೂ ಮುನ್ನೆಚ್ಚರಿಕೆ ವಹಿಸುತ್ತಿದ್ದು, ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕಿದೆ ಎಂದು ವರ್ಷದ ಎರಡನೇ ಗ್ರ್ಯಾನ್ ಸ್ಲ್ಯಾಮ್ ಫ್ರೆಂಚ್ ಓಪನ್ ಪಂದ್ಯಾವಳಿಯ ನಿರ್ದೇಶಕ ಗೈ ಫರ್ಗೆಟ್ ತಿಳಿಸಿದ್ದಾರೆ.
ನೋವಾಕ್ ಜೊಕೊವಿಚ್
ನೋವಾಕ್ ಜೊಕೊವಿಚ್
Updated on

ನವದೆಹಲಿ: ಫ್ರೆಂಚ್ ಓಪನ್ ಸಂಘಟಕರು ಪ್ರತಿ ಹಂತದಲ್ಲೂ ಮುನ್ನೆಚ್ಚರಿಕೆ ವಹಿಸುತ್ತಿದ್ದು, ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕಿದೆ ಎಂದು ವರ್ಷದ ಎರಡನೇ ಗ್ರ್ಯಾನ್ ಸ್ಲ್ಯಾಮ್ ಫ್ರೆಂಚ್ ಓಪನ್ ಪಂದ್ಯಾವಳಿಯ ನಿರ್ದೇಶಕ ಗೈ ಫರ್ಗೆಟ್ ತಿಳಿಸಿದ್ದಾರೆ. 

ಕೊರೊನಾ ಸಮಯದಲ್ಲಿ ಜೊಕೊವಿಚ್ ನಾಲ್ಕು ಹಂತದ ಆಡ್ರಿಯಾ ಪ್ರವಾಸವನ್ನು ನಡೆಸಿದರು. ಆದರೆ ಎರಡು ಹಂತಗಳಲ್ಲಿ ನಾಲ್ಕು ಆಟಗಾರರು ಮತ್ತು ಇಬ್ಬರು ತರಬೇತುದಾರರು ಜೊಕೊವಿಚ್ ಸೋಂಕಿಗೆ ಒಳಗಾಗಿದ್ದರು. ಇದರ ನಂತರ ಎರಡನೇ ಹಂತದ ಅಂತಿಮ ಪಂದ್ಯ ಮತ್ತು ಉಳಿದ ಎರಡು ಹಂತಗಳನ್ನು ರದ್ದುಪಡಿಸಲಾಯಿತು. ಜೊಕೊವಿಚ್ ನಂತರ ಎಲ್ಲರಿಗೂ ಕ್ಷಮೆಯಾಚಿಸಿದರು. 

ಈ ಸಂದರ್ಭದಲ್ಲಿ, ಆಟಗಾರರು ನೆಟ್‌ನಲ್ಲಿ ತಬ್ಬಿಕೊಳ್ಳುವುದು ಮತ್ತು ಫೋಟೋಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿತ್ತು. ಈ ಪ್ರವಾಸದಲ್ಲಿ, ಜೊಕೊವಿಚ್ ಹೊರತುಪಡಿಸಿ, ಗ್ರಿಗರ್ ಡಿಮಿಟ್ರೋವ್, ಬೊರ್ನಾ ಕೋರಿಚ್ ಮತ್ತು ವಿಕ್ಟರ್ ಟ್ರಿಕಿ ಅವರು ವೈರಸ್ ಗೆ ತುತ್ತಾಗಿದ್ದರು. 

'ಯಾರಿಗೂ ಯಾವುದೇ ಅಹಿತಕರ ಸಂಭವಿಸದಿರುವುದು ಒಳ್ಳೆಯದು, ಆದರೆ ಕೆಲವು ಪ್ರಕರಣಗಳು ಬರುವುದು ಸಹ ಆತಂಕಕಾರಿಯಾಗಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾವು ಅವುಗಳನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ನಮ್ಮೆಲ್ಲರಿಗೂ ಮಾರಕವಾಗಲಿದೆ, ಇದನ್ನೆಲ್ಲಾ ಗಮನಿಸಿ ನಾವು ಎಲ್ಲರ ಸುರಕ್ಷತೆಯ ಭರವಸೆ ನೀಡಲು ಬಯಸುತ್ತೇವೆ. ಜಾಗರೂಕರಾಗಿರಿ, ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ' ಎಂದು ತಿಳಿಸಿದ್ದಾರೆ. 

ಫ್ರೆಂಚ್ ಓಪನ್ ಮೇನಲ್ಲಿ ನಡೆಯಬೇಕಿತ್ತು ಆದರೆ ಕರೋನಾದ ಕಾರಣ ಅದನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಯುಎಸ್ ಓಪನ್ ಮುಗಿದ ನಂತರ ಫ್ರೆಂಚ್ ಓಪನ್ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com