
ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಜೂನ್ 22ರವರೆಗೆ ಮುಂದೂಡಲಾಗಿದೆ. ಕೋವಿಡ್-19 ಲಾಕ್ ಡೌನ್ ಮಧ್ಯೆ ಬೇರೆಯವರಿಂದ ಶಿಫಾರಸು ಪಡೆಯುವುದು ಕಷ್ಟವೆಂದು ಕ್ರೀಡಾಪಟುಗಳು ಸ್ವ ನಾಮ ನಿರ್ದೇಶನ ಮಾಡಿಕೊಳ್ಳಬಹುದು ಎಂದು ಕ್ರೀಡಾ ಇಲಾಖೆ ತಿಳಿಸಿದೆ.
ನಾಮನಿರ್ದೇಶನ ಪ್ರಕ್ರಿಯೆಗೆ ನಿನ್ನೆ ಕೊನೆಯ ದಿನವಾಗಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ಕ್ರೀಡಾಪಟುಗಳಿಗೆ ನಾಮ ನಿರ್ದೇಶನ, ಅಧಿಕಾರಿಗಳಿಂದ ಶಿಫಾರಸು ಮಾಡಿಕೊಳ್ಳಲು ಕಷ್ಟವಾಗುತ್ತಿರುವುದಿಂದ ದಿನಾಂಕ ಮುಂದೂಡಿ ಶಿಫಾರಸು ಪ್ರಕ್ರಿಯೆಗೆ ವಿನಾಯ್ತಿ ನೀಡಲಾಗಿದೆ.
ಈ ವರ್ಷ ಇ ಮೇಲ್ ಮೂಲಕ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಫೆಡರೇಶನ್, ಕ್ರೀಡಾ ಮಂಡಳಿ, ಮಾಜಿ ಪ್ರಶಸ್ತಿ ಪುರಸ್ಕೃತರ ಶಿಫಾರಸು ಪತ್ರಗಳನ್ನು ಹೊಂದಿದ್ದರೆ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಶಸ್ತಿಗಳಲ್ಲಿ, ರಾಜೀವ್ ಗಾಂಧಿ ಖೇಲ್ ರತ್ನವನ್ನು ಪ್ರತಿವರ್ಷ ಆಗಸ್ಟ್ 29ಕ್ಕೆ ನೀಡಲಾಗುತ್ತದೆ. ಅಂದು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಹುಟ್ಟಿದ ದಿನ, ಅದೇ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.
Advertisement