ಲಾಕ್ ಡೌನ್ ನಡುವೆ ಕ್ರೀಡಾಪಟುಗಳಿಗೆ ಹೊರಾಂಗಣ ತರಬೇತಿಗೆ ಅವಕಾಶ, ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆಗೆ ಸೂಚನೆ

ಪಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (ಎನ್‌ಐಎಸ್) ಮತ್ತು ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಹೊರಾಂಗಣ ಮತ್ತು ಜಿಮ್ ತರಬೇತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಪಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (ಎನ್‌ಐಎಸ್) ಮತ್ತು ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಹೊರಾಂಗಣ ಮತ್ತು ಜಿಮ್ ತರಬೇತಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಒಂಬತ್ತು ಪುಟಗಳ ದಾಖಲೆಯಲ್ಲಿ, ಎಎಫ್‌ಐ ಎರಡು ಕೇಂದ್ರಗಳಲ್ಲಿ ತರಬೇತಿಯನ್ನು ಪುನರಾರಂಭಿಸಲು ತನ್ನ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ರೂಪಿಸಿದೆ. ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಸಂಭವನೀಯ ಆಟಗಾರರು ಬೆಂಗಳೂರಿನಲ್ಲಿದ್ದರೆ, ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿದಂತೆ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಎನ್‌ಐಎಸ್ ಪಟಿಯಾಲದಲ್ಲಿದ್ದಾರೆ.

ಕಟ್ಟುನಿಟ್ಟಾದ ಮಾರ್ಗಸೂಚಿಗಳಲ್ಲಿ ಉಗುಳುವುದು, ಹ್ಯಾಂಡ್‌ಶೇಕ್ ಅಥವಾ ಅಪ್ಪುಗೆ, ಗುಂಪುಗಳಲ್ಲಿ ವಾಕಿಂಗ್ ಅಥವಾ ಟ್ರೈನಿಂಗ್ ನಿಷೇಧಿಸಲಾಗಿದೆ.ಹ್ಯಾಂಡ್ಹೆಲ್ಡ್ ಉಪಕರಣಗಳಾದ ಜಾವೆಲಿನ್, ಡಿಸ್ಕಸ್, ಲಾಠಿ ಇತ್ಯಾದಿಗಳನ್ನು ಬಳಕೆಗೆ ಮೊದಲು ಮತ್ತು ನಂತರ ಸ್ವಚ್ಚಗೊಳಿಸುವುದು ಕಡ್ಡಾಯವಾಗಿರಲಿದೆ. ತರಬೇತಿಯ ಸಮಯ ಹಾಗೂ ಇತರೆ ವೇಳೆಗಳಲ್ಲಿ ಸಾಮಾಜಿಕ  ಅಂತರವನ್ನು  ಕಾಪಾಡಿಕೊಳ್ಳಲು ತರಬೇತುದಾರರು ಜವಾಬ್ದಾರರಾಗಿರುತ್ತಾರೆ."ಕ್ಷೌರಿಕನ ಅಂಗಡಿಗಳು / ಸಲೂನ್ / ಬ್ಯೂಟಿ ಪಾರ್ಲರ್‌ಗಳು / ಶಾಪಿಂಗ್ ಮಾಲ್‌ಗಳಿಗೆ ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ" ಎಂದು ಎಎಫ್‌ಐ ತಮ್ಮ ಮಾರ್ಗಸೂಚಿಗಳಲ್ಲಿ ತಿಳಿಸಿದೆ. "ತರಬೇತಿ / ವೈದ್ಯಕೀಯ / ಪುನರ್ವಸತಿ ಉದ್ದೇಶವನ್ನು ಹೊರತುಪಡಿಸಿ ನಿಮ್ಮ ಹಾಸ್ಟೆಲ್ ಕೊಠಡಿಗಳನ್ನು ಬಿಟ್ಟು ಹೊರಹೋಗುವಂತಿಲ್ಲ ಎಟಿಎಂಗೆ ಭೇಟಿ ನೀಡಿದರೆ ಸಣ್ಣ ಬಾಟಲಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಒಯ್ಯಿರಿ ಮತ್ತು ಎಟಿಎಂ ಯಂತ್ರವನ್ನು ನಿರ್ವಹಿಸಿದ ನಂತರ ಸ್ಯಾನಿಟೈಸರ್ ಬಳಸಿ."

ಕ್ರೀಡಾಳುಗಳು ಯಾವ ಕಾರಣಕ್ಕೂ ಐಸ್ ಬಾತ್ ಗಳನ್ನು ಬಳಸಬ್ರದುಒಮ್ಮೆ ತರಬೇತಿ ಮುಗಿದ ನಂತರ ತಮ್ಮ ಹಾಸ್ಟೆಲ್ ಕೋಣೆಗಳಿಗೆ "ಹಿಂದಕ್ಕೆ ಧಾವಿಸಬೇಕು".

ಲಾಕ್‌ಡೌನ್ ವಿಸ್ತರಣೆಗಾಗಿ ಗೃಹ ಸಚಿವಾಲಯವು ತನ್ನ ಮಾರ್ಗಸೂಚಿಗಳನ್ನು ಪಟ್ಟಿ ಮಾಡುವಾಗ ಕ್ರೀಡಾಪಟುಗಳಿಗೆ ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳನ್ನು ತೆರೆಯಲಾಗುವುದು ಎಂದು ಹೇಳಿತ್ತುಗೃಹ ಸಚಿವಾಲಯ (ಎಂಎಚ್‌ಎ) ಮತ್ತು ಆಯಾ ರಾಜ್ಯ ಮಾರ್ಗಸೂಚಿಗಳ ಪ್ರಕಾರ ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಕ್ರೀಡಾ ಸಚಿವ ಕಿರೆನ್ ರಿಜಿಜು ಸೋಮವಾರ ಪುನರುಚ್ಚರಿಸಿದ್ದಾರೆ. ಆದರೆ ಜಿಮ್‌ಗಳು ಮತ್ತು ಈಜುಕೊಳಗಳು ಮುಚ್ಚಿರಲಿದೆ. "ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳಲ್ಲಿ ಎಂಹೆಚ್‌ಎ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತ್ತು ಅವು ಇರುವ ರಾಜ್ಯಗಳ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಆದಾಗ್ಯೂ, ಜಿಮ್‌ಗಳು ಮತ್ತು ಈಜುಕೊಳಗಳ ಬಳಕೆಯನ್ನು ಇನ್ನೂ ನಿಷೇಧಿಸಲಾಗಿದೆ , ”ಎಂದು ರಿಜಿಜು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com