2017. 2018, 2019ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪುರಸ್ಕಾರ ಘೋಷಣೆ

2017. 2018, 2019ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ಯುವ ಸಬಲೀಕರಣ, ಕ್ರೀಡಾ ಸಚಿವರಾದ ಸಿಟಿ ರವಿ ಘೋಷಿಸಿದ್ದಾರೆ.
ಸಿಟಿ ರವಿ
ಸಿಟಿ ರವಿ
Updated on

ಬೆಂಗಳೂರು: 2017. 2018, 2019ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ಯುವ ಸಬಲೀಕರಣ, ಕ್ರೀಡಾ ಸಚಿವರಾದ ಸಿಟಿ ರವಿ ಘೋಷಿಸಿದ್ದಾರೆ.

2017ನೇ ಸಾಲಿನಲ್ಲಿ 14 ಮಂದಿಗೆ ಏಕಲವ್ಯ, 10 ಜನರಿಗೆ ಕರ್ನಾಟಕ ಕ್ರೀಡಾ ರತ್ನ ಹಾಗೂ ಇಬ್ಬರಿಗೆ ಜೀವಮಾನ ಸಾಧನೆ ಪುರಸ್ಕಾರ ಲಭಿಸಿದ್ದರೆ 2018ರ ಸಾಲಿನಲ್ಲಿ 9 ಮಂದಿಗೆ ಏಕಲವ್ಯ, ಏಳು ಜನರಿಗೆ ಕರ್ನಾಟಕ ಕ್ರೀಡಾ ರತ್ನ, ಇಬ್ಬರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಇನ್ನು 2019ನೇ ಸಾಲಿನಲ್ಲಿ ಎಂಟು ಜನರಿಗೆ ಏಕಲವ್ಯ, 9 ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಹಾಗೂ ಇಬ್ಬರಿಗೆ ಜೀವಮಾನ ಸಾಧನೆ ಪುರಸ್ಕಾರ ಘೋಷಣೆಯಾಗಿದೆ.

ವೇದಾ ಕೃಷ್ಣಮೂರ್ತಿ, ಮಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ ಮೊದಲಾದವರು ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

ಎಂ.ಫ್ರೆಡ್ರಿಕ್ಸ್, ಡಾ.ಪಟೇಲ್ ಮೊಹಮದ್ ಇಲಿಯಾಸ್, ಸಿ.ಎಂ ಕುರುಂಬಯ್ಯ, ಮಂಜುನಾಥ್.ಆರ್, ಶಾಂತಾ ರಂಗಸ್ವಾಮಿ ಹಾಗೂ ಸಂಜೀವ್ ಆರ್ ಕನಕ ಅವರುಗಳಿಗೆ ಜೀವಮಾನ ಸಾಧನೆ ಪುರಸ್ಕಾರ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಹೀಗಿದೆ-

  • 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು ರೀನಾ ಜಾರ್ಜ್ ಎಸ್. (ಆಥ್ಲೆಟಿಕ್), ಮಿಥುಲಾ (ಬ್ಯಾಡ್ಮಿಂಟನ್), ಅವಿನಾಶ ಮಣಿ (ಈಜು), ಅರ್ಜುನ್ ಹಲ್ಕುರ್ಕಿ(ಕುಸ್ತಿ), ಅನಿಲ್ ಕುಮಾರ್ ಬಿ.ಕೆ (ಬಾಸ್ಕೆಟ್‌ಬಾಲ್), ಉಷಾರಾಣಿ ಎನ್. (ಕಬ್ಬಡಿ), ಖುಷಿ ವಿ.(ಟೇಬಲ್ ಟೆನ್ನಿಸ್), ಎಂ.ಎಸ್. ಪೊನ್ನಮ್ಮ (ಹಾಕಿ), ವಿನಾಯಕ್ ರೋಖಡೆ(ವಾಲಿಬಾಲ್), ಎಂ.ದೀಪಾ (ರೋಯಿಂಗ್), ರಾಜು ಅಡಿವೆಪ್ಪಾ ಭಾಟಿ (ಸೈಕ್ಲಿಂಗ್), ವರ್ಷಾ ಎನ್.(ಬಿಲಿಯಡ್ಸ, ಸ್ನೂಕರ್), ತೇಜಸ್ ಕೆ. (ಶೂಟಿಂಗ್), ಶೇಖರ್ ವೀರಾಸ್ವಾಮಿ( ಟೆನ್ನಿಸ್, ಪ್ಯಾರಾ) 
  • 2017 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಎಂ.ಫ್ರೆಡ್ರಿಕ್ಸ್ (ಹಾಕಿ), ಡಾ.ಪಟೇಲ್ ಮೊಹಮದ್ ಇಲಿಯಾಸ್(ವಾಲಿಬಾಲ್) 
  • 2017ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿ ವೀಣಾ ಎಂ(ಖೋ ಖೋ), ಕೌಶಲ್ಯ ಕೆ.ಎಸ್ ( ಕಬ್ಬಡ್ಡಿ ), ಜಯಲಕ್ಷ್ಮಿ ಜಿ. (ಬಾಲ್ ಬ್ಯಾಡ್ಮಿಂಟನ್), ಅನುಶ್ರೀ ಎಚ್.ಎಸ್. (ಕುಸ್ತಿ), ರಂಜಿತ ಎಂ. (ಥ್ರೋ ಬಾಲ್), ಭಿಮ್ಮಪ್ಪ ಹಡಪದ (ಮಲ್ಲಕಂಬ), ಮಹೇಶ ಆರ್ ಎರೆಮನೆ (ಆಟ್ಯಾಪಾಟ್ಯಾ), ಚಂದ್ರಶೇಖರ ಎಚ್.ಕಲ್ಲಹೊಲದ (ಗುಂಡು ಎತ್ತುವುದು), ಗೋಪಾಲ ಕೃಷ್ಣ ಪ್ರಭು, (ಕಂಬಳ), ಶ್ರೀನಿವಾಸ್ ಗೌಡ(ಕಂಬಳ), ಮಣಿಕಂದನ್ (ಪ್ಯಾರಾಕ್ಲೈಂಬಿಂಗ್) 
  • 2018ನೇ ಸಾಲಿನ ಏಕಲವ್ಯ ಪ್ರಶಸ್ತಿ ವಿಜಯಕುಮಾರಿ ಜಿ.ಕೆ (ಅಥ್ಲೆಟಿಕ್), ಬಾಂಧವ್ಯ ಎಚ್.ಎಂ (ಬ್ಯಾಸ್ಕೆಟ್ ಬಾಲ್), ಕೆ.ಎಲ್.ರಾಹುಲ್ (ಕ್ರಿಕೆಟ್), ಮೃಘಾ ಗೂಗಾಡ್ (ಸೈಕ್ಲಿಂಗ್), ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್) ನಿಕ್ಕಿನ್ ತಿಮ್ಮಯ್ಯ ( ಹಾಕಿ), ಗೀತಾ ದಾನಪ್ಪ ಗೊಳ್(ಜುಡೋ) ಶ್ರೀಹರಿ ನಟರಾಜ(ಈಜು) ಶಕೀನ ಖಾತೂನ್ (ಪ್ಯಾರಾ ಪವರ್ ಲಿಫ್ಟಿಂಗ್) *
  • 2018 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ * ಸಿ.ಎಂ ಕುರುಂಬಯ್ಯ (ಹಾಕಿ) ಮಂಜುನಾಥ್.ಆರ್ (ಕಬಡ್ಡಿ) 
  • 2018 ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ ಸಂಪತ್ ನಾಗಪ್ಪ ಯರಗಟ್ಟಿ(ಅಟ್ಯಾ_ಪಟ್ಯಾ) ಸುರೇಶ್ ಶೆಟ್ಟಿ (ಕಂಬಳ) ಶಿವಕುಮಾರ್ ಎಚ್.ಎನ್ ( ಖೋ ಖೋ) ಕಿರಣ್ ಕುಮಾರ್.ಐ (ಟೆನ್ನಿ ಕ್ವಾಯಿಟ್), ಮಲ್ಲಪ್ಪ ಗೌಡ ಪಾಟೀಲ್(ಕುಸ್ತಿ) ಯಮನಪ್ಪ ಮಾಯಪ್ಪ ಕಲ್ಲೋಳಿ ( ಮಲ್ಲಕಂಬ) ಲಾವಣ್ಯ ಬಿ.ಡಿ( ಬಾಲ್ ಬ್ಯಾಟ್ಮಿಂಟನ್) 
  • 2019 ನೇ ಏಕಲವ್ಯ ಪ್ರಶಸ್ತಿ ಅಭಿನಯ ಶೆಟ್ಟಿ (ಅಥ್ಲೆಟಿಕ್), ವೇದಾ ಕೃಷ್ಣ ಮೂರ್ತಿ( ಕ್ರಿಕೆಟ್), ವೆಂಕಪ್ಪ ಗೆಂಗಲಗುತ್ತಿ( ಸೈಕ್ಲಿಂಗ್), ಪುಲಿಂದ ಲೋಕೇಶ್ ತಿಮ್ಮಣ್ಣ(ಹಾಕಿ), ಖುಷಿ ದಿನೇಶ್( ಈಜು), ಮಯಾಂಕ್ ಅಗರ್ವಾಲ್ (ಕ್ರಿಕೆಟ್), ಪುನೀತ್ ನಂದಕುಮಾರ್( ಪ್ಯಾರಾ ಈಜು), ಅಭಿಷೇಕ್ ಎನ್ ಶೆಟ್ಟಿ( ಅಥ್ಲೆಟಿಕ್) 
  • 2019 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಶಾಂತಾ ರಂಗಸ್ವಾಮಿ (ಕ್ರಿಕೆಟ್), ಸಂಜೀವ್ ಆರ್ ಕನಕ( ಖೊ ಖೋ) 
  • 2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಅನಿತಾ ಬಿಚಗಟ್ಟಿ (ಅಟ್ಯಾ-ಪಟ್ಯಾ), ಪಲ್ಲವಿ ಎಸ್ ಕೆ (ಬಾಲ್ ಬ್ಯಾಟ್ಮಿಂಟನ್) ರಕ್ಷಿತ ಎಸ್ (ಕಬಡ್ಡಿ) ಸುದರ್ಶನ್(ಖೋ ಖೋ), ಅನುಪಮ ಹೆಚ್ ಕೆರಕಲಮಟ್ಟಿ(ಮಲ್ಲಕಂಬ) ಪ್ರವೀಣ್ ಕೆ (ಕಂಬಳ) ಮಂಜುನಾಥ್ ಹೆಚ್ (ಥ್ರೋ ಬಾಲ್), ಸತೀಶ್ ಪಡತಾರೆ (ಕುಸ್ತಿ) ಅನೀಶಾ ಮಣೇಗಾರ್ ( ಟೆನ್ನಿಕ್ವಾಯಿಟ್) 
  • ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು 2018_19: ಸ್ವರ್ಣ ಫುಟ್ ಬಾಲ್ ಅಭಿವೃದ್ಧಿ ಸಂಸ್ಥೆ, ಮಂಡ್ಯ ವಿ.ಆರ್ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ , ಹಳಿಯಾಳ 2019 -20 : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು 2020_21 : ಸಿದ್ದಗಂಗಾ ಮಠ ಸಂಸ್ಥೆ ತುಮಕೂರು ಮಾಣಿಕಾ ಪ್ರಭು ಸ್ಪೋರ್ಟ್ಸ್ ಅಕಾಡೆಮಿ ಮಾಣಿಕನಗರ. ಬೀದರ್ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com