ಲಂಡನ್: ಎಟಿಪಿ ವರ್ಲ್ಡ್ ಟೂರ್ ಫೈನಲ್‌ನ ಸೆಮಿಫೈನಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ಪೇನ್‌ನ ಎರಡನೇ ನಂಬರ್ ರಫೇಲ್ ನಡಾಲ್ ಸೋತು ನಿರಾಸೆ ಅನುಭವಿಸಿದರು.
ವರ್ಷಾಂತ್ಯದ ಟೆನಿಸ್ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ನಡುವೆ ನಡೆಯಲಿದೆ.
ಥೀಮ್ ಸೆಮೀಸ್ ನಲ್ಲಿ ಜೊಕೊವಿಚ್ ವಿರುದ್ಧ 7-5, 6-7 (10-12), 7-6 (7-5) ಸೆಟ್ ಗಳಿಂದ ಗೆಲುವು ಸಾಧಿಸಿದ್ದರೆ ನಡಾಲ್ ವಿರುದ್ಧ ಮೆಡ್ವೆಡೆವ್ 3-6, 7-6 (7-4), 6-3 ಅಂತರದಲ್ಲಿ ಜಯ ಗಳಿಸಿದ್ದಾರೆ.
Advertisement