ಫುಟ್ಬಾಲ್ ದಿಗ್ಗಜ ಮರಡೋನಾಗೆ ಗೌರವ ಸಲ್ಲಿಕೆ, ಮೆಸ್ಸಿಗೆ 600 ಯುರೋ ದಂಡ

ಫುಟ್ಬಾಲ್ ಜಗತ್ತಿನ ದಿಗ್ಗಜ ಆಟಗಾರ ಡಿಯಾಗೋ ಮರಡೋನಾ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇಡೀ ಕ್ರೀಡಾ ಜಗತ್ತು ಮರಡೋನಾ ಸಾವಿಗೆ ಕಂಬನಿ ಮಿಡಿದಿತ್ತು. ಮರಡೋನಾ ಅವರ ನಿಧನಕ್ಕೆ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಗೌರವ ಸಲ್ಲಿಸಿದ ರೀತಿಗೆ ಹಾಲಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ದಂಡ ವಿಧಿಸಲಾಗಿದೆ.

Published: 03rd December 2020 07:05 PM  |   Last Updated: 03rd December 2020 07:05 PM   |  A+A-


messi

ಮೆಸ್ಸಿ

Posted By : Lingaraj Badiger
Source : UNI

ನವದೆಹಲಿ: ಫುಟ್ಬಾಲ್ ಜಗತ್ತಿನ ದಿಗ್ಗಜ ಆಟಗಾರ ಡಿಯಾಗೋ ಮರಡೋನಾ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇಡೀ ಕ್ರೀಡಾ ಜಗತ್ತು ಮರಡೋನಾ ಸಾವಿಗೆ ಕಂಬನಿ ಮಿಡಿದಿತ್ತು. ಮರಡೋನಾ ಅವರ ನಿಧನಕ್ಕೆ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಗೌರವ ಸಲ್ಲಿಸಿದ ರೀತಿಗೆ ಹಾಲಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ದಂಡ ವಿಧಿಸಲಾಗಿದೆ.

ಕಳೆದ ಭಾನುವಾರ ಒಸಾಸುನಾ ತಂಡದ ವಿರುದ್ಧ ಲಿಯೋನೆಲ್ ಮೆಸ್ಸಿ ಪ್ರತಿನಿಧಿಸುವ ಬಾರ್ಸಿಲೋನಾ ತಂಡ 4-0 ಅಂತರದ ಗೆಲುವನ್ನು ಸಾಧಿಸಿತು. ಈ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ ಜರ್ಸಿಯನ್ನು ತೆಗೆದು ಮರಡೋನಾಗೆ ಗೌರವವನ್ನು ಸಲ್ಲಿಸಿದ್ದರು. ಈ ಕಾರಣಕ್ಕೆ ಮೆಸ್ಸಿಗೆ ಹಳದಿ ಕಾರ್ಡ್ ನೀಡಲಾಗಿತ್ತು. ಇದಕ್ಕಾಗಿ 600 ಯುರೋ ದಂಡವನ್ನು ಸಹ ವಿಧಿಸಲಾಗಿದೆ.

ಲಿಯೋನೆಲ್ ಮೆಸ್ಸಿಗೆ 600 ಯುರೋ ದಂಡ ವಿಧಿಸಲಾಗಿದ್ದರೆ, ಬಾರ್ಸಿಲೋನಾ ಕ್ಲಬ್‌ಗೆ 180 ಯುರೋ ದಂಡ ವಿಧಿಸಲಾಗಿದೆ. 

ಮರಡೋನಾ ನಿಧನಕ್ಕೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ತಮ್ಮ ಜರ್ಸಿಯ ಬದಲಾಗಿ ಮರಡೋನಾ ಅವರು ಧರಿಸಿದ್ದ ನೆವೆಲ್ಸ್‌ನ ಓಲ್ಡ್ಸ್ ಬಾಯ್ಸ್ ತಂಡದ ಕೆಂಪು ಹಾಗೂ ಕಪ್ಪು ಬಣ್ಣದ ಜರ್ಸಿಯನ್ನು ಮೆಸ್ಸಿ ಧರಿಸಿಕೊಂಡರು. ಇದು ವಿಶ್ವಾದ್ಯಂತ ಸಾಕಷ್ಟು ಮೆಚ್ಚುಗೆಯನ್ನು ಪಡೆದಿತ್ತು.

Stay up to date on all the latest ಕ್ರೀಡೆ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp