ಟ್ವಿಟ್ಟರ್ ನಲ್ಲಿ ಮೋಡಿ ಮಾಡಿದ ಕಂಬಳ ಓಟಗಾರ, ಕೇಂದ್ರ ಸಚಿವರನ್ನು ತಲುಪಿದ ಕರಾವಳಿ ಕ್ರೀಡೆ

ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳ ಓಟವೀಗ ಕೇಂದ್ರ ಸಚಿವರ ಗಮನ ಸೆಳೆದಿದೆ. ಮೂಡಬಿದಿರೆಯ ಕಂಬಳ ಓಟಗಾರನಾಗಿರುವ ಶ್ರೀನಿವಾಸ್ ಗೌಡ ಟ್ವಿಟ್ಟರ್ ಮೂಲಕ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಜಾಗತಿಕ ಓಟಗಾರ ಉಸೇನ್ ಬೋಲ್ಟ್ ಅನ್ನೂ ನಾಚಿಸುವಂತೆ ಓಟ ನಡೆಸಿದ್ದ ಶ್ರೀನಿವಾಸ ಗೌಡರ ಪ್ರತಿಭೆಗೆಇದೀಗ ಕೇಂದ್ರ ಕ್ರೀಡಾ ಸಚಿವರೇ ಫಿದಾ ಆಗಿದ್ದಾರೆ. ಶ್ರೀನಿವಾಸ
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳ ಓಟವೀಗ ಕೇಂದ್ರ ಸಚಿವರ ಗಮನ ಸೆಳೆದಿದೆ. ಮೂಡಬಿದಿರೆಯ ಕಂಬಳ ಓಟಗಾರನಾಗಿರುವ ಶ್ರೀನಿವಾಸ್ ಗೌಡ ಟ್ವಿಟ್ಟರ್ ಮೂಲಕ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಜಾಗತಿಕ ಓಟಗಾರ ಉಸೇನ್ ಬೋಲ್ಟ್ ಅನ್ನೂ ನಾಚಿಸುವಂತೆ ಓಟ ನಡೆಸಿದ್ದ ಶ್ರೀನಿವಾಸ ಗೌಡರ ಪ್ರತಿಭೆಗೆ ಇದೀಗ ಕೇಂದ್ರ ಕ್ರೀಡಾ ಸಚಿವರೇ ಫಿದಾ ಆಗಿದ್ದಾರೆ. ಶ್ರೀನಿವಾಸ ಗೌಡ ಅವರನ್ನು ಕ್ರೀಡಾ ಸಚಿವಾಲಯ ತರಬೇತಿಗಾಗಿ ಆಹ್ವಾನಿಸಿದೆ.

"ನಾನು ಶ್ರೀನಿವಾಸ್ ಗೌಡರಿಗೆ ಕರೆ ಮಾಡುವೆ,  ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೋಚ್ ಗಳಿಂದ ತರಬೇತಿ ಕೊಡಿಸಲು ಆಹ್ವಾನಿಸುವೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ, ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ಅಂತಿಮ ಮಾನವ ಶಕ್ತಿ ಮತ್ತು ಸಹಿಷ್ಣುತೆ ಅಗತ್ಯವಿದೆ.. ಭಾರತದಲ್ಲಿ ಯಾವುದೇ ಪ್ರತಿಭೆಗಳು ಪರೀಕ್ಷೆಗೊಳ್ಲದೆ ಇರಬಾರದೆಂದು ನಾನು ಖಚಿತಪಡಿಸಿಕೊಳ್ಳುತ್ತೇನೆ." ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು  ಶನಿವಾರ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಮುನ್ನ ಉದ್ಯಮಿ ಆನಂದ್ ಮಹೀಂದ್ರಾ ಸಹ ಈ ಕಂಬಳ ಓಟಗಾರರನ್ನು ಮೆಚ್ಚಿ ಟ್ವಿಟ್ ಮಾಡಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಈತನಿಗೆ  100 ಮೀ ಓಟಗಾರನಾಗಲುತಕ್ಕ ತರಬೇತಿ ಒದಗಿಸಬೇಕೆಂದು ಬರೆದಿದ್ದರು.ಅಲ್ಲದೆ ಒಂದೊಮ್ಮೆ ಒಲಂಪಿಕ್ಸ್ ನಲ್ಲಿ ಕಂಬಳವನ್ನು ಸೇರಿಸಿದ್ದಾದರೆ ಶ್ರೀನಿವಾಸ್ ಗೌಡರಿಗೆ ಚಿನ್ನದ ಪದಕ ಖಚಿತ ಎಂದೂ ಅವರು ಮೆಚ್ಚುಗೆ ಸೂಚಿಸಿದ್ದರು. ಆನಂದ್ ಮಹೀಂದ್ರಾ ಅವರ ಟ್ವಿಟ್ ಗೆ ಪ್ರತಿಯಾಗಿ ಕೇಂದ್ರ ಸಚಿವರು ಮೇಲಿನ ಟ್ವೀಟ್ ಬರೆದಿದ್ದಾರೆ.

ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸಹ ಶ್ರೀನಿವಾಸ್ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

28 ರ ಹರೆಯದ ಶ್ರೀನಿವಸ ಗೌಡ ಕಟ್ಟಡ ನಿರ್ಮಾಣ ಕೆಲಸಗಾರರಾಗಿದ್ದು ಮಂಗಳೂರಿನಿಂದ ಸುಮಾರು 0 ಕಿಲೋಮೀಟರ್ ದೂರದಲ್ಲಿರುವ ಐಕಳ  ಗ್ರಾಮದ ಕಂಬಳದಲ್ಲಿ 145 ಮೀಟರ್ ದೂರವನ್ನು ಕ್ರಮಿಸಲು ಕೇವಲ 13.62 ಸೆಕೆಂಡುಗಳನ್ನು ತೆಗೆದುಕೊಂDಡರು. ಶ್ರೀನಿವಾಸ 100 ಮೀಟರ್ ದೂರ ಓಡಲು ಕೇವಲ 9.55 ಸೆಕೆಂಡುಗಳನ್ನು ತೆಗೆದುಕೊಂಡರು ಮತ್ತು ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಸಾಧನೆಗೆ ಸಹ ಮಿಗಿಲಾಗಿ ಸಾಧನೆ ಮಾಡಿದರು. ಬೋಲ್ಟ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ 9.58 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿದೆ.

ಕಂಬಳವು ಕರ್ನಾಟಕದಲ್ಲಿ ನಡೆಯುವ ವಾರ್ಷಿಕ ಪಾರಂಪರಿಕ ಕ್ರೀಡೆಯಾಗಿದ್ದು  ಜನರು ಕೋಣಗಳೊಡನೆ ಭತ್ತದ ಗದ್ದೆಗಳ ಮೂಲಕ ಓಡುತ್ತಾ ಸಾಗುವ ಕ್ರೀಡೆ ಇದಾಗಿದೆ. ರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸ್ಥಳೀಯ ತುಳುವ ಭೂಮಾಲೀಕರು ಮತ್ತು ಮನೆಯವರು ಪ್ರಾಯೋಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com