ಏಷ್ಯನ್ ಕುಸ್ತಿ: ಎರಡನೇ ದಿನ ಭಾರತಕ್ಕೆ ಮೂರು ಕಂಚು

ಬುಧವಾರ - ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನ ಎರಡನೇ ದಿನ ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ಪ್ರಾಪ್ತಿಯಾಗಿದೆ.  ಭಾರತದ ಅಶು ಮತ್ತು ಆದಿತ್ಯ ಕುಂಡು ಕ್ರಮವಾಗಿ 67 ಕೆಜಿ ಮತ್ತು 72 ಕೆಜಿ ಗ್ರೀಕೋ-ರೋಮನ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಹರ್ದೀಪ್ (97 ಕೆಜಿ)  ಸಹ ಪದಕ ಸುತ್ತಿನಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಏಷ್ಯನ್ ಕುಸ್ತಿ: ಎರಡನೇ ದಿನ ಭಾರತಕ್ಕೆ ಮೂರು ಕಂಚು
ಏಷ್ಯನ್ ಕುಸ್ತಿ: ಎರಡನೇ ದಿನ ಭಾರತಕ್ಕೆ ಮೂರು ಕಂಚು

ನವದೆಹಲಿ: ಬುಧವಾರ - ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನ ಎರಡನೇ ದಿನ ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ಪ್ರಾಪ್ತಿಯಾಗಿದೆ.  ಭಾರತದ ಅಶು ಮತ್ತು ಆದಿತ್ಯ ಕುಂಡು ಕ್ರಮವಾಗಿ 67 ಕೆಜಿ ಮತ್ತು 72 ಕೆಜಿ ಗ್ರೀಕೋ-ರೋಮನ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಹರ್ದೀಪ್ (97 ಕೆಜಿ)  ಸಹ ಪದಕ ಸುತ್ತಿನಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಅಶು ಸಿರಿಯಾದ ಅಬ್ದುಲ್ಕರೀಮ್ ಮೊಹಮ್ಮದ್ ಅಲ್-ಹಸನ್ ಅವರನ್ನು 8-1 ಗೋಲುಗಳಿಂದ ಸೋಲಿಸಿದರೆ, ಕುಂಡು  ಜಪಾನ್ ನ ನವೊ ಕುಸಕಾ ಅವರನ್ನು 8-0 ಗೋಲುಗಳಿಂದ ಸೋಲಿಸಿದರು.

97 ಕೆಜಿ ವಿಭಾಗದಲ್ಲಿ, ಹರ್ದೀಪ್ ತನ್ನ ಆರಂಭಿಕ ಪಂದ್ಯವನ್ನು 9-1ರಿಂದ ಇರಾನ್‌ನ ಮೊಹಮ್ಮಧಾಡಿ ಅಬ್ದುಲ್ಲಾ ಸರವಿ ಎದುರು ಮಣಿದರೂ ಕಡೆಗೆ ಕಿರ್ಗಿಸ್ತಾನ್‌ನ ಸ್ಪರ್ಧಿಯ ಎದುರು 3-1 ಅ<ತರದಿಂಡ ಗೆಲುವು ಕಂಡರು.

ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೆ ಐದು ಪದಕಗಳನ್ನು ಗೆದ್ದಿದೆ, ಸುನಿಲ್ ಕುಮಾರ್ 87 ಕೆ.ಜಿ.ಯಲ್ಲಿ ಐತಿಹಾಸಿಕ ಚಿನ್ನ ಮತ್ತು ಅರ್ಜುನ್ ಕುಲಕರ್ಣಿ55 ಕೆ.ಜಿ ಗ್ರೀಕೋ-ರೋಮನ್ ವಿಭಾಗದಲ್ಲಿ  ಕಂಚು ಗೆದ್ದಿದ್ದಾರೆ.

ಆದಾಗ್ಯೂ, ಬುಧವಾರ ನಡೆದ 60 ಕೆಜಿ ಗ್ರೀಕೋ-ರೋಮನ್ ಕಂಚಿನ ಪದಕ ಪಂದ್ಯದಲ್ಲಿ ಜ್ಞಾನೇಂದರ್ 0-6ರಿಂದ ಸೋಲು ಕಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com