ಬಾಕ್ಸಿಂಗ್: ಮೇರಿ ಕೋಮ್ ಗೆ ಜಯ, ಟೋಕಿಯೋಗೆ ತೆರಳಲು ಇನ್ನೊಂದೇ ಹೆಜ್ಜೆ!

ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಏಷ್ಯನ್ / ಓಷಿಯಾನಿಯನ್ ಒಲಿಂಪಿಕ್ ಕ್ವಾಲಿಫೈಯರ್ಸ್‌ನಲ್ಲಿ ನಡೆದ ಆರಂಭಿಕ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿ ಎರಡನೇ ಬಾರಿ  ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. 
ಬಾಕ್ಸಿಂಗ್: ಮೇರಿ ಕೋಮ್ ಗೆ ಜಯ, ಟೋಕಿಯೋಗೆ ತೆರಳಲು ಇನ್ನೊಂದೇ ಹೆಜ್ಜೆ!
ಬಾಕ್ಸಿಂಗ್: ಮೇರಿ ಕೋಮ್ ಗೆ ಜಯ, ಟೋಕಿಯೋಗೆ ತೆರಳಲು ಇನ್ನೊಂದೇ ಹೆಜ್ಜೆ!

ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಏಷ್ಯನ್ / ಓಷಿಯಾನಿಯನ್ ಒಲಿಂಪಿಕ್ ಕ್ವಾಲಿಫೈಯರ್ಸ್‌ನಲ್ಲಿ ನಡೆದ ಆರಂಭಿಕ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿ ಎರಡನೇ ಬಾರಿ  ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಮೇರಿ ಕೋಮ್ (51 ಕೆಜಿ) ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ನ್ಯೂಜಿಲೆಂಡ್‌ನ ಟ್ಯಾಸ್ಮಿನ್ ಬೆನ್ನಿ ವಿರುದ್ಧ  5-0 ಅಂತರದ ಗೆಲುವು ಸಾಧಿಸಿದರು. 

ಮೇರಿ ಕೋಮ್ ಅವರ ಗೆಲುವಿನೊಂದಿಗೆ, 11 ಭಾರತೀಯ ಬಾಕ್ಸರ್ ಗಳು  ಈ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಅಮಿತ್ ಪಂಗಲ್ (52 ಕೆಜಿ) ಮಂಗೋಲಿಯ ಎನ್‌ಖ್ಮನಾಡಾಕ್ ಖಾರ್ಖು ವಿರುದ್ಧ 3-2 ಗೋಲುಗಳಿಂದ ಜಯ ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಕೋಮ್ ಮತ್ತು ಪಂಗಲ್ ಇಬ್ಬರೂ ತಮ್ಮ ಟೋಕಿಯೊ ಒಲಿಂಪಿಕ್ ಕನಸನ್ನು ನನಸಾಗಿಸಲು ಕೇವಲ ಒಂದು ಗೆಲುವಿನ ದೂರದಲ್ಲಿದ್ದಾರೆ.

ಈ ಮಧ್ಯೆ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಗೌರವ್ ಸೋಲಂಕಿ (57 ಕೆಜಿ) ಅಗ್ರ ಶ್ರೇಯಾಂಕಿತ ಮತ್ತು ವಿಶ್ವ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಮಿರಾಜಿಜ್ಬೆಕ್ ಮಿರ್ಜಾಖಾಲಿಲೋವ್ ಅವರನ್ನು ಮಣಿಸಿದ್ದಾರೆ.

ಮೇರಿ ತಮ್ಮ ಮುಂದಿನ ಸುತ್ತಿನಲ್ಲಿ ಫಿಲಿಪೈನ್ಸ್‌ನ ಐರಿಶ್ ಮ್ಯಾಗ್ನೋ ಅವರನ್ನು ಎದುರಿಸಲಿದ್ದಾರೆ.ಭಾನುವಾರ, ಆರು ಭಾರತೀಯರು ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ಆಡಲಿದ್ದಾರೆ. ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಪೂಜಾ ರಾಣಿ (75 ಕೆಜಿ), ವಿಕಾಸ್ ಕ್ರಿಶನ್ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಸಚಿನ್ ಕುಮಾರ್ (81 ಕೆಜಿ), ಸತೀಶ್ ಕುಮಾರ್ (+ 91 ಕೆಜಿ) ಎಲ್ಲರೂ ತಮ್ಮ ಪಂದ್ಯದ ಗೆಲುವಿಗಾಗಿ ಕಾದಾಡುತ್ತಿದ್ದು ಟೋಕಿಯೋ ಟಿಕೆಟ್ ಗಾಗಿ ನಿರೀಕ್ಷೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com