ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಭಾರತದ ಜಿಲ್ಲಿ ದಲಬೆಹೆರಗೆ ಚಿನ್ನ, ನೂತನ ವಿಶ್ವ ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು 

ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಿಲ್ಲಿ ದಲಬೆಹೆರ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಟೂರ್ನಮೆಂಟ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಂಚಿನ ಪದಕ ಗಳಿಸಿಕೊಂಡ ಚಾನು ಈ ಹಿಂದಿನ ತಮ್ಮದೇ ಆದ ರಾಷ್ಟ್ರ
ಜಿಲ್ಲಿ ದಲಬೆಹೆರ,  ಮಿರಾಬಾಯಿ ಚಾನು
ಜಿಲ್ಲಿ ದಲಬೆಹೆರ, ಮಿರಾಬಾಯಿ ಚಾನು

ನವದೆಹಲಿ: ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಿಲ್ಲಿ ದಲಬೆಹೆರ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಟೂರ್ನಮೆಂಟ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಂಚಿನ ಪದಕ ಗಳಿಸಿಕೊಂಡ ಚಾನು ಈ ಹಿಂದಿನ ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು.

26 ವರ್ಷದ ಭಾರತೀಯ ವೇಟ್‌ಲಿಫ್ಟರ್ ಸ್ನ್ಯಾಚ್‌ನಲ್ಲಿ 86 ಕೆಜಿ ಎತ್ತಿದ್ದರೆ ಕ್ಲೀನ್ ಆಂಡ್ ಜರ್ಕ್ ನಲ್ಲಿ 119 ಕೆಜಿ ಭಾರವೆತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆರು ಕಡ್ಡಾಯ ಅರ್ಹತಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುವ ಚಾನು ಟೋಕಿಯೊ ಒಲಿಂಪಿಕ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರಾದ ಜಿಲ್ಲಿಸ್ನ್ಯಾಚ್‌ನಲ್ಲಿ 69 ಕೆಜಿ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 88ಕೆಜಿ ಭಾರವನ್ನೆತ್ತುವ ಮೂಲಕ ಒಟ್ಟೂ 157 ಕೆಜಿಗೆ ಮುಗಿಸಿದರು. ಈ ಮೂಲಕ ಒಲಿಂಪಿಕ್ ಅರ್ಹತಾ ಸ್ಪರ್ಧೆಯ ಎಲ್ಲಾ ಮೂರು ವಿಭಾಗಗಳ ಚಿನ್ನದ ಹಂತದಲ್ಲಿ ಜಿಲ್ಲಿ ಉತ್ತೀರ್ಣರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com