ನವದೆಹಲಿ: ಭಾರತದ ಹಾಕಿ ತಂಡಗಳ "ಅದ್ಭುತ" ಪ್ರದರ್ಶನ ಜನರು ಟೋಕಿಯೊ ಒಲಂಪಿಕ್ಸ್ ಅನ್ನು ನೆನಪಿಟ್ಟುಕೊಳ್ಳುವ ವಿಷಯಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಸೆಮಿಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಮಹಿಳಾ ತಂಡ ಸೋತ ಕೂಡಲೇ ಪ್ರಧಾನಿ ಮೋದಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಕಂಚಿನ ಪದಕಕ್ಕಾಗಿ ಸ್ಪರ್ಧೆಯಲ್ಲಿವೆ. ಪುರುಷರ ತಂಡ ಕೂಡಾ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು ಸೋತಿತ್ತು.
ಪಂದ್ಯದ ನಂತರ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಮತ್ತು ತರಬೇತುದಾರ ಜೋರ್ಡ್ ಮರಿಜ್ನೆ ಜೊತೆಗೆ ಮಾತನಾಡಿದ ಪ್ರಧಾನಿ, ಅವರ ಪ್ರದರ್ಶನಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಹಿಳಾ ತಂಡ ಅಥ್ಲೆಟಿಕ್ ನ ಕೌಶಲ್ಯಯುತ ತಂಡವಾಗಿದ್ದು, ಅತ್ಯುತ್ತಮ ಶ್ರಮ ವಹಿಸಿದೆ. ಅದೇ ರೀತಿಯಲ್ಲಿ ಮುಂದೆ ನೋಡಬೇಕು, ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದೆ. ಅವರು ನಿರುತ್ಸಾಹಗೊಳ್ಳಬಾರದು ಎಂದು ಹೇಳಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ.
ನಮ್ಮ ಹಾಕಿ ತಂಡದ ಅದ್ಬುತ ಪ್ರದರ್ಶನದಿಂದಾಗಿ ಟೋಕಿಯೊ 2020ನ್ನು ಜನರು ನೆನಪಿನಲ್ಲಿಟ್ಟುಕೊಳ್ಳುವ ಒಂದು ವಿಚಾರವಾಗಿದೆ. ಇಂದು ಮತ್ತು ಗೇಮ್ಸ್ ಗಳಲ್ಲಿ ನಮ್ಮ ಮಹಿಳಾ ಹಾಕಿ ತಂಡ ಚಾಣಾಕ್ಷತದಿಂದ ಆಡಿದೆ, ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿದೆ. ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ. ಮುಂದಿನ ಆಟಕ್ಕೆ ಮತ್ತು ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಧೈರ್ಯಶಾಲಿ ಭಾರತೀಯ ಮಹಿಳಾ ಹಾಕಿ ತಂಡ ಬಿರುಸಿನ ಪ್ರದರ್ಶನ ನೀಡಿತು, ಆದರೆ, ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಅರ್ಜೆಂಟೀನಾ ವಿರುದ್ಧ 1-2 ಅಂತರದಿಂದ ಸೋತಿದ್ದರಿಂದ ಮೊದಲ ಒಲಿಂಪಿಕ್ ಫೈನಲ್ ಸ್ಥಾನವನ್ನು ಪಡೆಯಲು ಇದು ಸಾಕಾಗಲಿಲ್ಲ.
Advertisement