ಹಾಕಿಯಲ್ಲಿ ಭಾರತಕ್ಕೆ ಕಂಚು: ಕೋಚ್ ರೀಡ್, ನಾಯಕ ಮನ್ ಪ್ರೀತ್ ಸಿಂಗ್'ಗೆ ಕರೆ ಮಾಡಿ ಶ್ಲಾಘಿಸಿದ ಪ್ರಧಾನಿ ಮೋದಿ; ವಿಡಿಯೋ

ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಹಿನ್ನಲೆಯಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಮತ್ತು ತಂಡದ ಕೋಚ್ ಗ್ರಹಾಂ ರೀಡ್ ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ ಅವರು ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.
ಗ್ರಹಾಂ ರೀಡ್-ಮನ್ ಪ್ರೀತ್ ಸಿಂಗ್
ಗ್ರಹಾಂ ರೀಡ್-ಮನ್ ಪ್ರೀತ್ ಸಿಂಗ್

ನವದೆಹಲಿ: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಹಿನ್ನಲೆಯಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಮತ್ತು ತಂಡದ ಕೋಚ್ ಗ್ರಹಾಂ ರೀಡ್ ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ ಅವರು ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.

ಜರ್ಮನಿಯ ವಿರುದ್ಧ 5-4 ಗೋಲುಗಳಿಂದ ಗೆಲುವು ಸಾಧಿಸಿದ ನಂತರ ಮನ್ ಪ್ರೀತ್ ಸಿಂಗ್ ಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದಿಸಿದು.

ಮನ್ ಪ್ರೀತ್ ಸಿಂಗ್ ಜೀ ನಿಮಗೆ ಅನೇಕ ಅಭಿನಂದನೆಗಳು. 'ನೀವು ಮರಳಿ ಬಂದ ನಂತರ ನಾವು ಖಂಡಿತವಾಗಿಯೂ ಭೇಟಿಯಾಗುತ್ತೇವೆ. ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು. ನಂತರ ಮೋದಿ ರೀಡ್ ಜೊತೆ ಮಾತನಾಡುತ್ತಾ, 'ಅಭಿನಂದನೆಗಳು. ನಾವು ಇತಿಹಾಸವನ್ನು ರಚಿಸಿದ್ದೇವೆ ಎಂದು ಹೇಳಿದರು. 

ನಿಮ್ಮ ಮಾತುಗಳು ನಮಗೆ ಬಹಳ ಸ್ಪೂರ್ತಿದಾಯಕವಾಗಿದೆ. ಧನ್ಯವಾದಗಳು ಎಂದು ರೀಡ್ ಪ್ರಧಾನಿಗೆ ಹೇಳಿದ್ದಾರೆ. 

ಕೊನೆಯದಾಗಿ ಮೋದಿ ರೀಡ್‌ಗೆ, 'ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು. ನನಗೆ ಅತ್ಯಂತ ಹೆಮ್ಮೆ ಇದೆ' ಎಂದು ಹೇಳಿದರು.

ಭಾರತ ಪುರುಷರ ಹಾಕಿ ತಂಡ 41 ವರ್ಷಗಳ ನಂತರ ಮೊದಲ ಬಾರಿಗೆ ಒಲಂಪಿಕ್ಸ್ ಪದಕ ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com