ಬೈಜುಸ್ ನಿಂದ ನೀರಜ್ ಚೋಪ್ರಾಗೆ 2 ಕೋಟಿ, ಇತರ ಪದಕ ವಿಜೇತರಿಗೆ ತಲಾ 1 ಕೋಟಿ ನಗದು ಬಹುಮಾನ ಘೋಷಣೆ
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕರಾದ ಬೈಜುಸ್, ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ 2 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ವೈಯಕ್ತಿಕ ಪದಕ ತಂದುಕೊಟ್ಟ ಇತರ ಆರು ಕ್ರೀಡಾಪಟುಗಳು ತಲಾ 1 ಕೋಟಿ ರೂಪಾಯಿ ಬಹುಮಾನವನ್ನು ಸ್ಟಾರ್ಟ್ ಆಫ್ ಪ್ರಕಟಿಸಿದೆ.
ಟೋಕಿಯೋದಲ್ಲಿ ಒಟ್ಟು ಏಳು ಪದಕಗಳನ್ನು ಗೆಲ್ಲುವ ಮೂಲಕ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಮೀರಾಬಾಯಿ ಚಾನು, ರವಿಕುಮಾರ್ ದಹಿಯಾ, ಲೊವ್ಲಿನಾ ಬೊರ್ಗೊಹೈನ್, ಪಿ. ವಿ. ಸಿಂಧು ಮತ್ತು ಭಜರಂಗ್ ಪುನಿಯಾ ಅವರಿಗೆ ತಲಾ 1 ಕೋಟಿ ರೂಪಾಯಿ ನೀಡುವುದಾಗಿ ಹೇಳಿಕೆಯಲ್ಲಿ ಬೈಜುಸ್ ತಿಳಿಸಿದೆ.
ದೇಶ ನಿರ್ಮಾಣದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸಲಿದೆ. ನಾವು ನಮ್ಮ ಒಲಂಪಿಕ್ಸ್ ಹಿರೋಗಳನ್ನು ಕೊಂಡಾಡುವ ಸಮಯ ಇದಾಗಿದೆ. ನಾಲ್ಕು ವರ್ಷಗಳಲ್ಲಿ ಒಂದು ಬಾರಿ ಮಾತ್ರವಲ್ಲ, ಪ್ರತಿದಿನವೂ ಇದು ನಡೆಯಬೇಕು ಎಂದು ಬೈಜುಸ್ ಸಂಸ್ಥೆ ಸ್ಥಾಪಕ ಹಾಗೂ ಸಿಇಒ ಬೈಜು ರವೀಂದ್ರನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ