ಬರ್ನ್: ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರು ಟೆನಿಸ್ ಅಂಗಳದಲ್ಲಿ ಎದುರಾಳಿಗಳ ಪಟ್ಟುಗಳಿಗೆ ತಿರುಗೇಟು ನೀಡಿ ಹೈರಾಣು ಮಾಡುವುದನ್ನು ಅಭಿಮಾನಿಗಳು ನೋಡಿಯೇ ಇರುತ್ತಾರೆ. ಇದೀಗ ಅವರು ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಿರುವ ಇನ್ ಸ್ಟಾಗ್ರಾಂ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ಫೆಡರರ್ ಅವರು ತಮ್ಮ ಟೇಬಲ್ ಟೆನ್ನಿಸ್ ಆಟದ ಪ್ರಾವೀಣ್ಯತೆಯನ್ನು ಬಹಿರಂಗ ಪಡಿಸಿದ್ದಾರೆ.
ನಂಬರ್ ಒನ್ ಪಟ್ಟದಲ್ಲಿದ್ದ 40ರ ಹರೆಯದ ರೋಜರ್ ಫೆಡರರ್ ಕಳೆದ ಕೆಲ ವರ್ಷಗಳಿಂದ ಹೊಳಪು ಕಳೆದುಕೊಂಡಿದ್ದರು. ಆದರೆ ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಅವರ ವಿಡಿಯೋಗೆ ಲಕ್ಷಾಂತರ ಸಂಖ್ಯೆಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಈ ವಿಡಿಯೋಗೆ ಅಮೆರಿಕ ಸೇರಿದಂತೆ ಹಲ ದೇಶಗಳ ಟೆನ್ನಿಸ್ ತಾರೆಯರೂ ಕಾಮೆಂಟ್ ಮಾಡಿದ್ದಾರೆ.
Advertisement