ಪ್ರಾಯೋಜಕರ ಜೆರ್ಸಿ ತೊಡದೇ ಇದ್ದುದು ಉದ್ದೇಶಪೂರ್ವಕವಲ್ಲ: ಕುಸ್ತಿಪಟು ವಿನೇಶ್ ಫೋಗಟ್ ಸ್ಪಷ್ಟನೆ

ಟೊಕಿಯೊ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ್ದಾರೆ ಎನ್ನುವ ಕಾರಣಕ್ಕೆ ಭಾರತದ ರೆಸ್ಲಿಂಗ್ ಒಕ್ಕೂಟದಿಂದ ಅಮಾನತು ಶಿಕ್ಷೆಯನ್ನು ಎದುರಿಸುತ್ತಿರುವ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿ ಸ್ಪಷ್ಟನೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಟೊಕಿಯೊ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ್ದಾರೆ ಎನ್ನುವ ಕಾರಣಕ್ಕೆ ಭಾರತದ ರೆಸ್ಲಿಂಗ್ ಒಕ್ಕೂಟದಿಂದ ಅಮಾನತು ಶಿಕ್ಷೆಯನ್ನು ಎದುರಿಸುತ್ತಿರುವ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿ ಸ್ಪಷ್ಟನೆ ನೀಡಿದ್ದಾರೆ. 

ವಿನೇಶ್ ಫೋಗಟ್ ಅವರು ಪಂದ್ಯಾವಳಿ ವೇಳೆ ಅಧಿಕೃತ ಪ್ರಾಯೋಜಕರ ಜೆರ್ಸಿಯನ್ನು ತೊಡದೆ ಬೇರೆಯದೇ ಜೆರ್ಸಿಯನ್ನು ತೊಟ್ಟಿದ್ದರು. ಈ ಬಗ್ಗೆಯೂ ದೂರು ದಾಖಲಾಗಿದೆ. ಅಲ್ಲದೆ ಟೋಕಿಯೋದಲ್ಲಿ ಭಾರತೀಯ ಕ್ರೀಡಾಪಟುಗಳ ಜೊತೆ ವಾಸ್ತವ್ಯವನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾಗಿಯೂ ದೂರು ದಾಖಲಾಗಿತ್ತು.

ತಮ್ಮ ಮೇಲಿನ ದೂರುಗಳಿಗೆ ವಿನೇಶ್ ಫೋಗಟ್ ಸ್ಪಷ್ಟನೆ ನೀಡಿದ್ದಾರೆ. ಪ್ರಾಯೋಜಕರ ಜೆರ್ಸಿ ತೊಡದೇ ಇದ್ದುದು ನಿಜ ಆದರೆ ಅದು ಉದ್ದೇಶಪೂರ್ವಕವಲ್ಲ ಎಂದಿದ್ದಾರೆ. ಅಲ್ಲದೆ ಟೊಕಿಯೋದಲ್ಲಿ ವಾಸ್ತವ್ಯದ ಕುರಿತು ನಡೆದ ವಾಗ್ವಾದಕ್ಕೆ ಕೊರೊನಾ ಮಾರ್ಗಸೂಚಿಯ ಸಮರ್ಥನೆಯನ್ನು ನೀಡಿದ್ದಾರೆ. ಹಿಂದೆ ಎರಡು ಬಾರಿ ವಿನೇಶ್ ಕೊರೊನಾಗೆ ತುತ್ತಾಗಿದ್ದರು. ಕೊರೊನಾ ಸೋಂಕಿನ ಅಡ್ಡಪರಿಣಾಮಗಳನ್ನು ಇನ್ನೂ ಎದುರಿಸುತ್ತಿದ್ದ ಕಾರಣ ಪ್ರತ್ಯೇಕ ವ್ಯವಸ್ಥೆಗಾಗಿ ಅವರು ಬೇಡಿಕೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. 

ಈ ಬಾರಿಯ ಒಲಿಂಪಿಕ್ಸ್ ಕುಸ್ತಿ ಪಂದ್ಯಾವಳಿಯಲ್ಲಿ ವಿನೇಶ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಸೋತು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಅವರು ಪಂದ್ಯಾವಳಿ ವೇಳೆ ಅಶಿಸ್ತಿನ ವರ್ತನೆ ತೋರಿದ್ದಾರೆ ಎಂದು ಆಪಾದಿಸಲಾಗಿತ್ತು. ಅದೇ ಕಾರಣಕ್ಕೆ ಫೆಡರೇಷನ್ ಅವರನ್ನು ಅಮಾನತುಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com