
ನವದೆಹಲಿ: ಟೋಕಿಯೊ ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮುಂದೆ ಯುವತಿಯರು ನಡೆಸಿರುವ ಅಶ್ಲೀಲ ನೃತ್ಯ ವಿವಾದಕ್ಕೆ ಕಾರಣವಾಗಿದೆ. ದೇಶಕ್ಕೆ ಚಿನ್ನದ ಪದಕ ಗೆದ್ದು ತಂದ ಕ್ರೀಡಾಪಟುವೊಬ್ಬರ ಮುಂದೆ ಈ ರೀತಿಯ ವರ್ತನೆಯೇ ಎಂದು ನೆಟಿಜನ್ ಗಳು ಕೆಂಡಾಮಂಡಲರಾಗಿದ್ದಾರೆ.
ಒಲಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಜೂಮ್ ಆ್ಯಪ್ ಮೂಲಕ ರೇಡಿಯೋ ಜಾಕಿ ಮಲಿಷ್ಕಾ ಮೆಂಡೊನ್ಸಾ ಶುಕ್ರವಾರ ಸಂದರ್ಶನ ನಡೆಸಿದರು. ಸಂದರ್ಶನದ ಭಾಗವಾಗಿ, ಮಲಿಷ್ಕಾ ಅವರೊಂದಿಗೆ ಕೆಲವು ಯುವತಿಯರು ಲ್ಯಾಪ್ ಟಾಪ್ ನಲ್ಲಿ ನೀರಜ್ ಚೋಪ್ರಾ ಅವರನ್ನು ನೋಡಿ 1957 ರ ಬಾಲಿವುಡ್ ಸಿನಿಮಾ "ನಯಾ ದೌರ್" ನ "ಉಡೆನ್ ಜಬ್ ಜಬ್ ದಲ್ಹೆ ತೇರಿ" ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡಿದರು. ನಂತರ ಮಲಿಷ್ಕಾ, ನೀರಜ್ ಗೆ ಕೆಲವು ಪ್ರಶ್ನೆ ಕೇಳಿದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಮಲಿಷ್ಕಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ವೀಕ್ಷಿಸಿದ ನೆಟ್ಟಿಗರು ಯುವತಿಯರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಪದಕ ಗೆದ್ದು ತಂದ ಕ್ರೀಡಾಪಟುವೊಂದಿಗೆ ವರ್ತಿಸುವ ರೀತಿಯೇ ಇದು. ನಿಮ್ಮ ನಡವಳಿಕೆ ತಲೆ ತಗ್ಗಿಸುವಂತಿದೆ. ನೀವು ಆತನಿಗೆ ನೀಡುವ ಗೌರವ ಇದೇನಾ ಎಂದು ನೇಟಿಜನ್ ಗಳು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ತೋರಿಸಿ ಚಿನ್ನ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜ ಮೇಲ್ಮಟ್ಟದಲ್ಲಿ ಹಾರಾಡುವಂತೆ ಮಾಡಿದ್ದರು. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನೀರಜ್ ಚೋಪ್ರಾ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದರು.
Advertisement