ನಮ್ಮ ಅಥ್ಲೀಟ್ ಗಳಿಗೆ ಅಂತಾರಾಷ್ಟ್ರೀಯ ಅಭಿಮುಖತೆ ಹೆಚ್ಚು ಅಗತ್ಯ: ಅಂಜು ಬಾಬಿ ಜಾರ್ಜ್

ಭಾರತ ಈ ಬಾರಿಯ ಟೋಕಿಯೋ ಒಲಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದಿದ್ದು ಬಹುಕ್ರೀಡಾ ಉತ್ಸವದಲ್ಲಿನ ಉತ್ತಮ ಭವಿಷ್ಯದ ನಿರೀಕ್ಷೆ ಮೂಡಿಸಿದೆ.
ಅಂಜು ಬೋಬಿ ಜಾರ್ಜ್
ಅಂಜು ಬೋಬಿ ಜಾರ್ಜ್
Updated on

ಭಾರತ ಈ ಬಾರಿಯ ಟೋಕಿಯೋ ಒಲಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದಿದ್ದು ಬಹುಕ್ರೀಡಾ ಉತ್ಸವದಲ್ಲಿನ ಉತ್ತಮ ಭವಿಷ್ಯದ ನಿರೀಕ್ಷೆ ಮೂಡಿಸಿದೆ.

ಆದರೆ ಈ ಗೆಲುವಿನಲ್ಲೇ ವಿಹರಿಸುತ್ತಿರುವುದು ದೇಶವನ್ನು ಉತ್ತಮ ಗತಿಗೆ ಕೊಂಡೊಯ್ಯುವುದಿಲ್ಲ. ಭವಿಷ್ಯದಲ್ಲಿ ಭಾರತ ಬಹುಕ್ರೀಡಾ ಉತ್ಸವದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾದರೆ ಆ ನಿಟ್ಟಿನಲ್ಲಿ ಮಾಡಬೇಕಿರುವ ಕೆಲಸಗಳು, ಕೈಗೊಳ್ಳಬೇಕಿರುವ ಕ್ರಮಗಳೂ ಹಲವಾರಿವೆ.

ಬೆಂಗಳೂರು ಮೂಲದ ಕ್ರೀಡಾಪಟುವಾಗಿರುವ ಅಂಜು ಬಾಬಿ ಜಾರ್ಜ್ ಹೈ ಜಂಪ್ ನ ವಿಭಾಗದಲ್ಲಿ 2003 ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಕಂಚಿನ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದು ಭಾರತದ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಅಭಿಮುಖತೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಥ್ಲೀಟ್ ಗಳ ಅಭಿಮುಖತೆ, ಕೋಚ್ ಗಳ ಮಹತ್ವ, ಕಿರಿಯ ಕ್ರೀಡಾಪಟುಗಳು ಹಿರಿಯ ಸ್ಥಾನಕ್ಕೆ ಮೇಲೇರಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. 

ಒಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆಯನ್ನು ಯಾವ ರೀತಿಯಲ್ಲಿ ಸುಧಾರಣೆ ಮಾಡಬಹುದಾಗಿದೆ?

ನಮ್ಮ ಕಿರಿಯ ಕ್ರೀಡಾಪಟುಗಳು ಒಳ್ಳೆಯ ಪರ್ಯಾಯ ಶಕ್ತಿಯಾಗಿದ್ದಾರೆ. ಈ ಪೈಕಿ ಹಲವರು ಮುಂದಿನ ಒಲಂಪಿಕ್ಸ್ ನಲ್ಲಿಯೂ ಇರುವ ಸಾಧ್ಯತೆ ಇದೆ. ಅವರು ಬೇರೆಯದ್ದೇ ಪ್ರಪಂಚ ಹಾಗೂ ವ್ಯವಸ್ಥೆಯಲ್ಲಿ ಬೆಳೆಯುತ್ತಿದ್ದಾರೆ. ಅವರು ತರಬೇತಿಗಾಗಿ ವಿದೇಶಕ್ಕೆ ಹೋಗಬೇಕೆಂದರೂ ವ್ಯವಸ್ಥೆ ಅದಕ್ಕೆ ಸೂಕ್ತ ಬೆಂಬಲ ನೀಡಲಿದೆ. ಇದು ಅವರ ಭವಿಷ್ಯಕ್ಕೇ ಒಳ್ಳೆಯದು. ಮಾನಸಿಕ ಅಡೆತಡೆಗಳಿರುವುದಿಲ್ಲ. ಎಸ್ಎಐ, ಟಾರ್ಗೆಟ್ ಒಲಂಪಿಕ್ ಪೋಡಿಯಮ್ ಯೋಜನೆ (ಟಿಒಪಿಎಸ್) ಪ್ರಧಾನಿ ಹಾಗೂ ಕ್ರೀಡಾ ಸಚಿವಾಲಯದ ಬೆಂಬಲ ಬಹಳಷ್ಟಿದೆ ಎನ್ನುತ್ತಾರೆ ಅಂಜು ಬಾಬಿ ಜಾರ್ಜ್. 

ನೀವು ಹಲವಾರಿ ವಿಶ್ವಮಟ್ಟದ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದೀರ, ಭಾರತೀಯರಲ್ಲಿರುವ ಕೊರತೆ ಏನು?

ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಅಭಿಮುಖತೆ ಮುಖ್ಯ ನಿರಂತರವಾಗಿರುವುದು ಇನ್ನೂ ಮುಖ್ಯ. ಭಾರತದಲ್ಲಿ ನಮಗೆ ಎಲ್ಲವೂ ಸಿಗುತ್ತಿದೆ. ತರಬೇತಿ ವಿಷಯದಲ್ಲಿ ಬೇರೆ ರಾಷ್ಟ್ರಗಳಿಗೆ ಸರಿಸಮರಾಗಿದ್ದೇವೆ. ಆದರೆ ಅಭಿಮುಖತೆ ದೊಡ್ಡ ಮಟ್ಟದ ಚಾಂಪಿಯನ್ಶಿಪ್ ಗಳಲ್ಲಿ ನಮ್ಮ ಗ್ರಹಿಕೆಯನ್ನು ಬದಲಾವಣೆ ಮಾಡಲಿದೆ. ಈಗ ಇದರ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅಂಜು ಬಾಬಿ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಭೆಯನ್ನು ಗುರುತಿಸಿ ಬಾಲ್ಯದಿಂದಲೇ ಉತ್ತೇಜಿಸುವುದು ಹೇಗೆ?

ಪ್ರತಿಭೆಯನ್ನು ಗುರುತಿಸುವುದು ವೈಜ್ಞಾನಿಕ ಮಾರ್ಗದಲ್ಲಿ ನಡೆಯಬೇಕು ಹಾಗು ಕೋಚ್ ಗಳ ಗಮನ ಪ್ರಾಮುಖ್ಯತೆ ಪಡೆಯುತ್ತವೆ. ಕೋಚ್ ಗಳು ಸಂಗತಿಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಾರೆ. ಅವರ ಮೆದುಳು ಸಹ ಕಂಪ್ಯೂಟರ್ ನಂತೆಯೇ, ಕ್ರೀಡಾಪಟುಗಳನ್ನು ಗುರುತಿಸುವುದಕ್ಕಾಗಿಯೇ ಟ್ಯೂನ್ ಮಾಡಲಾಗಿದೆ. ಪ್ರತಿಭೆ ಗುರುತಿಸುವುದು ಮೊದಲ ಭಾಗವಾದರೆ, ಅವರನ್ನು ಪೋಷಣೆ ಮಾಡುವುದು ಎರಡನೇ ಹಂತ ಅವರ ವಯಸ್ಸಿನ ಕಾರಣ ಅವರೊಂದಿಗೆ ಜಾಗರೂಕರಾಗಿರಬೇಕಾಗುತ್ತದೆ. ಅತಿಯಾಗದೇ ಅವರಲ್ಲಿನ ಅತ್ಯುತ್ತಮ ಕ್ಷಮತೆಯನ್ನು ಹೊರತರುವ ಸವಾಲಿರುತ್ತದೆ. 

ಭಾರತದಲ್ಲಿ ವಿದೇಶಿ ಕೋಚ್ ಗಳಿದ್ದಾರೆ. ಭಾರತೀಯ ಕೋಚ್ ಗಳಿಗೆ ಕೊರತೆ ಇದೆಯೇ?

ಭಾರತದಲ್ಲಿ ಉತ್ತಮ ಕೋಚ್ ಗಳಿದ್ದಾರೆ. ಆದರೆ ಅವರು ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಸಬೇಕಿದೆ. ಅವರ ಜ್ಞಾನ ಅಪ್ಡೇಟ್ ಆಗಬೇಕಾಗುತ್ತದೆ. ಜರ್ಮನಿ, ಅಮೆರಿಕದಂತಹ ರಾಷ್ಟ್ರಗಳಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಯುತ್ತಿರುತ್ತದೆ. ಈ ವಿಷಯದಲ್ಲಿ ಅವರು ನಮಗಿಂತ ಮುಂದಿದ್ದಾರೆ. ಅಥ್ಲೀಟ್ ಗಳು ಖಂಡಿತವಾಗಿಯೂ ಚಾಂಪಿಯನ್ ಗಳಾಗುತ್ತಾರೆ. ಆದರೆ ಅಂತಹ ಹಲವು ಚಾಂಪಿಯನ್ ಗಳನ್ನು ತಯಾರಿಸುವುದು ಕೋಚ್. ಅಥ್ಲೀಟ್ ಗಳು ಸಾಕಷ್ಟು ಅಭಿಮುಖತೆ ಪಡೆಯುತ್ತಿದ್ದಾರೆ. ಆದರೆ ಕೋಚ್ ಗಳಿಗೆ ಅದು ಸಿಗುತ್ತಿಲ್ಲ. ಆದ್ದರಿಂದ ಅವರು ಅಥ್ಲೀಟ್ ಗಳ ಹಿಂದೆ ಉಳಿದಿದ್ದಾರೆ. ಕೋಚ್ ಗಳು ಅಥ್ಲೀಟ್ ಗಳು, ಅನುಭವ ಹಾಗೂ ಜ್ಞಾನದಲ್ಲಿ ಮುಂದಿರಬೇಕು.

ಯುವ ಅಥ್ಲೀಟ್ ಗಳ ಅಭಿವೃದ್ಧಿಗೆ ಯಾವುದು ಅತಿ ದೊಡ್ಡ ಅಡ್ಡಿ?

ಯುವ ವಯಸ್ಸಿನಲ್ಲಿ ಒಳ್ಳೆಯ ಕೋಚ್ ನ ಅಡಿಯಲ್ಲಿ ಪಳಗಬೇಕು. ನಾನೂ ಸಹ ಇಂತಹ ವಿಷಯಗಳನ್ನು ಹಲವು ಬಾರಿ ಎದುರಿಸಿ,  ವೃತ್ತಿಯಲ್ಲಿ ಪೆಟ್ಟು ತಿಂದಿದ್ದೇನೆ. ಹಲವು ಮಕ್ಕಳು ತೀವ್ರವಾಗಿ ಅಭ್ಯಾಸ ಮಾಡಿ ಅಥವಾ ಗಯಗೊಂಡು ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೆ. ಕಿರಿಯ ಅಥ್ಲೀಟ್ ಗಳು ಮೇಲ್ಮಟ್ಟಕ್ಕೆ ಬರದೇ ಇರುವುದಕ್ಕೆ ಇದೇ ಪ್ರಮುಖ ಕಾರಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com