ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್‍ಗೆ 'ವರ್ಷದ ಮಹಿಳೆ' ಪ್ರಶಸ್ತಿ

ವರ್ಲ್ಡ್ ಅಥ್ಲೆಟಿಕ್ಸ್  ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು 'ವರ್ಷದ ಮಹಿಳೆ'ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
ಅಂಜು ಬಾಬಿ ಜಾರ್ಜ್
ಅಂಜು ಬಾಬಿ ಜಾರ್ಜ್
Updated on

ಮೊನಾಕೊ: ವರ್ಲ್ಡ್ ಅಥ್ಲೆಟಿಕ್ಸ್ ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು 'ವರ್ಷದ ಮಹಿಳೆ' ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸಲು ಅವರ ಪ್ರಯತ್ನಗಳು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವ ಮೂಲಕ ಈ ವರ್ಷದ ಪ್ರಶಸ್ತಿಗೆ  ಅಂಜು ಬಾಬಿ ಹೆಚ್ಚು ಅರ್ಹರಾಗಿದ್ದಾರೆ. ಜಾರ್ಜ್, ಭಾರತದ ಮಾಜಿ ಅಂತಾರಾಷ್ಟ್ರೀಯ ಲಾಂಗ್ ಜಂಪ್ ತಾರೆಯಾಗಿದ್ದೂ ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016 ರಲ್ಲಿ ಅವರು ಯುವತಿಯರಿಗೆ ತರಬೇತಿ ಅಕಾಡೆಮಿಯನ್ನು ತೆರೆದಿದ್ದರು.

ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿಯನ್ನು ಪಡೆದಿರುವುದು ನಿಜವಾಗಿಯೂ 'ವಿನಮ್ರ ಮತ್ತು ಗೌರವ" ಎಂದು ಅಂಜು ಹೇಳಿದ್ದಾರೆ. "ಪ್ರತಿದಿನ ಬೆಳಿಗ್ಗೆ ಎದ್ದು ಮತ್ತೆ ಕ್ರೀಡಾಲೋಕಕ್ಕೆ ಹಿಂತಿರುಗಿಸುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ, ಇದು ಯುವತಿಯರನ್ನು ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಅನುವು ಮಾಡಿಕೊಡುತ್ತದೆ! ನನ್ನ ಪ್ರಯತ್ನವನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ವರ್ಚುವಲ್‌ ಸಭೆಯಲ್ಲಿ ತಾವು ಭಾಗವಹಿಸಿದ ಫೋಟೋ ಹಾಗೂ ಪ್ರಶಸ್ತಿಯ ಪ್ರಮಾಣ ಪತ್ರವನ್ನು ಟ್ವೀಟ್‌ ಕೂಡ ಮಾಡಿದ್ದಾರೆ.

ಹೌದು ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ವಿಶ್ವ ಅಥ್ಲೆಟಿಕ್ಸ್‍ನಿಂದ ವರ್ಷದ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2003ರ ವಿಶ್ವ ಚಾಂಪಿಯನ್‍ಶಿಪ್‍ನ ಲಾಂಗ್ ಜಂಪ್‍ನಲ್ಲಿ ಕಂಚಿನ ಪದಕ ಪಡೆದು ದೇಶದ ಹಿರಿಮೆಗೆ ಪಾತ್ರವಾಗಿದ್ದ ಅವರು ದೇಶದಲ್ಲಿ ನಿರಂತರವಾಗಿ ಬದಲಾವಣೆಯ ಧ್ವನಿಯಾಗಲು ಮತ್ತು ಯುವತಿಯರಿಗೆ ಅವರ ಹೆಜ್ಜೆಗಳನ್ನು ಅನುಸರಿಸಲು ಮಾರ್ಗದರ್ಶನ ನೀಡಿದ್ದಕ್ಕಾಗಿ 'ವರ್ಷದ ಮಹಿಳೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದ ಮಾಜಿ ಅಂತರರಾಷ್ಟ್ರೀಯ ಲಾಂಗ್ ಜಂಪ್ ತಾರೆ ಇನ್ನೂ ಕ್ರೀಡೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016ರಲ್ಲಿ, ಅಂಜು ಯುವತಿಯರಿಗಾಗಿ ತರಬೇತಿ ಅಕಾಡೆಮಿಯನ್ನು ತೆರೆದಿದ್ದು, ಈಗಾಗಲೇ ವಿಶ್ವ ಯು20 ಪದಕ ವಿಜೇತರನ್ನು ತಯಾರಿಸಲು ಸಹಾಯ ಮಾಡಿದೆ.

ಲಿಂಗ ಸಮಾನತೆಗಾಗಿ ನಿರಂತರ ಧ್ವನಿಯಾಗಿರುವ ಅವರು ಕ್ರೀಡೆಯಲ್ಲಿ ಭವಿಷ್ಯದ ನಾಯಕತ್ವ ಸ್ಥಾನಗಳಿಗಾಗಿ ಶಾಲಾಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್ ಅವರ ಉತ್ಸಾಹವನ್ನು ಕೊಂಡಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com