ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಗುರುವಾರ ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್‍ನ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಥಾಯ್ಲೆಂಡ್‍ನ ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ ನೇರ ಗೇಮ್‍ಗಳ ಜಯ ಸಾಧಿಸಿ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್‍ನ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಥಾಯ್ಲೆಂಡ್‍ನ ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ ನೇರ ಗೇಮ್‍ಗಳ ಜಯ ಸಾಧಿಸಿ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

48 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್‍ಫೈನಲ್ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ 21-14, 21-18ರಲ್ಲಿ ತನ್ನ ಥಾಯ್ ಎದುರಾಳಿಯನ್ನು ಸೋಲಿಸಿದರು. ಈ ಗೆಲುವಿನೊಂದಿಗೆ ಆರನೇ ಶ್ರೇಯಾಂಕದ ಸಿಂಧು, ಶೋಪೀಸ್ ಟೂರ್ನಮೆಂಟ್‍ನಲ್ಲಿ ಚೋಚುವಾಂಗ್ ವಿರುದ್ಧದ ತನ್ನ ದಾಖಲೆಯನ್ನು 5-3ಕ್ಕೆ ವಿಸ್ತರಿಸಿದರು.

ಈ ತಿಂಗಳ ಆರಂಭದಲ್ಲಿ ಬಿಡ್ಲ್ಯೂಎಫ್ ವಲ್ರ್ಡ್ ಟೂರ್ ಫೈನಲ್ಸ್ ಮತ್ತು ಮಾರ್ಚ್‍ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್‍ನ ಗುಂಪು ಪಂದ್ಯದಲ್ಲಿ ಸೋತಿದ್ದ ಸಿಂಧು ಈ ಪಂದ್ಯದಲ್ಲಿ ಚೊಚುವಾಂಗ್ ವಿರುದ್ಧ ಗೆಲ್ಲುವ ಮೂಲಕ ಅವಳಿ ಸೋಲಿನ ಸೇಡು ತೀರಿಸಿಕೊಂಡರು.

ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು ಕ್ವಾರ್ಟರ್ ಫೈನಲ್‍ನಲ್ಲಿ 21-10, 19-21, 21-11 ರಲ್ಲಿ ಸ್ಕಾಟ್ಲೆಂಡ್‍ನ ಕಿಸ್ರ್ಟಿ ಗಿಲ್ಮೊರ್‍ರನ್ನು ಸೋಲಿಸಿದ ಅಗ್ರ ಶ್ರೇಯಾಂಕದ ಮತ್ತು ವಿಶ್ವದ ನಂಬರ್ ಒನ್ ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ.

ಎರಡನೇ ಸೆಟ್‍ನಲ್ಲಿ 3-0 ಯೊಂದಿಗೆ ಸಿಂಧು ರೋಚಕ ಆರಂಭ ನೀಡಿದರೂ, ಈ ವೇಳೆ ಪಂದ್ಯವೂ ಸಾಕಷ್ಟು ಏರಿಳಿತಗಳನ್ನು ಕಂಡು ಸಿಂಧು ಅಂತ್ಯದಲ್ಲಿ 11-6 ಮುನ್ನಡೆಯೊಂದಿಗೆ ಪಿವಿ ಸಿಂಧು ಎದುರು ಥೈಯ್ ಆಟಗಾರ್ತಿ ಸೋಲೊಪ್ಪಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com