ಚದುರಂಗವನ್ನು ಬೇಧಿಸಿದ ಅಭಿಮನ್ಯು ಮಿಶ್ರಾ ಈಗ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್!

ಭಾರತೀಯ ಮೂಲದ ಅಮೆರಿಕಾ ಪ್ರಜೆ ಅಭಿಮನ್ಯು ಮಿಶ್ರಾ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಭಿಮನ್ಯು ಮಿಶ್ರ
ಅಭಿಮನ್ಯು ಮಿಶ್ರ

ನವದೆಹಲಿ: ಭಾರತೀಯ ಮೂಲದ ಅಮೆರಿಕಾ ಪ್ರಜೆ ಅಭಿಮನ್ಯು ಮಿಶ್ರಾ ಜಗತ್ತಿನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈ ವರೆಗೂ 2002 ರಲ್ಲಿ ಗೆದ್ದಿದ್ದ ರಷ್ಯಾದ 12 ವರ್ಷ 7 ತಿಂಗಳ ವಯಸ್ಸಿನ ಸೆರ್ಗೆ ಕರ್ಜಾಕಿನ್ ಜಗತ್ತಿನ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ಈ ದಾಖಲೆಯನ್ನು ಅಭಿಮನ್ಯು ಮುರಿದಿದ್ದಾರೆ. 

ಅಭಿಮನ್ಯು ತಮ್ಮ ಎದುರಾಳಿ ಜಿಎಂ ಭಾರತದ  ಮೂರನೇ ಹಾಗೂ ಅಂತಿಮ ಗ್ರ್ಯಾಂಡ್ ಮಾಸ್ಟರ್ ನಿಯಮಗಳನ್ನು ಪೂರ್ಣಗೊಳಿಸಿ ಲಿಯಾನ್ ಲ್ಯೂಕ್ ಮೆಂಡೊಂಕಾ ಅವರನ್ನು ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ವೆಜರ್ಕೆಪ್ಜೊ ಜಿಎಂ ಮಿಕ್ಸ್ ಈವೆಂಟ್ ನಲ್ಲಿ ಮಣಿಸಿದ್ದು, ಈ ದಾಖಲೆ ನಿರ್ಮಿಸಿದ್ದಾರೆ.

ಅಭಿಮನ್ಯುವಿನ ಪೋಷಕರು ದಶಕಗಳ ಹಿಂದೆ ಅಮೆರಿಕಾಗೆ ಹೋಗಿ ನೆಲೆಸಿರುವ ಭಾರತೀಯ ಮೂಲದ ದಂಪತಿಯಾಗಿದ್ದಾರೆ. 

ಅಭಿಮನ್ಯು ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಬೇಕಿದ್ದರೆ ಸೆ.5 ಕ್ಕೂ ಮುನ್ನ ಆತ ಮೂರು ಜಿಎಂ ನಿಯಮಗಳನ್ನು ಪೂರ್ಣಗೊಳಿಸಬೇಕಿತ್ತು ಹಾಗೂ 2,500 ಕ್ಕೂ ಹೆಚ್ಚು ಇಎಲ್ಒ ರೇಟಿಂಗ್ ನ್ನು ಗಳಿಸಬೇಕಿತ್ತು. ಈ ಸಾಧನೆಯನ್ನು ಮಾಡಿರುವ ಅಭಿಮನ್ಯು ಈಗ ಜಗತ್ತಿನ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೇ ತಿಂಗಳಲ್ಲಿ ಎರಡು ನಾರ್ಮ್ಸ್ ನ್ನು ಪೂರ್ಣಗೊಳಿಸಿದ್ದ ಅಭಿಮನ್ಯು ಮೂರನೆಯದ್ದನ್ನು ಪೂರ್ಣಗೊಳಿಸುವುದಕ್ಕೆ ಹೆಚ್ಚು ಕಷ್ಟಪಟ್ಟಿದ್ದರು. ಜಗತ್ತಿನ ಅತಿ ಕಿರಿಯ ಇಂಟರ್ನ್ಯಾಷನಲ್ ಮಾಸ್ಟರ್ (ಐಎಂ) ಎಂಬ ಹೆಗ್ಗಳಿಕೆಗೂ ಅಭಿಮನ್ಯು 2019 ರಲ್ಲಿ ಪಾತ್ರರಾಗಿದ್ದರು. ಆಗ ಅವರ ವಯಸ್ಸು 10 ವರ್ಷ 9 ತಿಂಗಳು 20  ದಿನಗಳು.

ತಮ್ಮ ಪುತ್ರನಿಗೆ ಗ್ರ್ಯಾಂಡ್ ಮಾಸ್ಟರ್ ಆಗಲು ಇನ್ನೆರಡು ವರ್ಷಗಳ ಕಾಲಾವಕಾಶ ಮಾತ್ರ ಇದೆ ಎಂಬುದನ್ನು ಅರಿತ ಪೋಷಕರು ಏಪ್ರಿಲ್ ತಿಂಗಳಲ್ಲಿ ಅಭಿಮನ್ಯುವನ್ನು ಓವರ್ ಬೋರ್ಡ್ ಟೂರ್ನಮೆಂಟ್ ನಡೆಯುತ್ತಿದ್ದ ಹಂಗೇರಿಗೆ ಕರೆದೊಯ್ದದರು. ಯುರೋಪ್ ನಲ್ಲಿ ಮೂರು ತಿಂಗಳ ಸತತ ಯತ್ನಗಳಲ್ಲಿ ಅಭಿಮನ್ಯು ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com