ಟೋಕಿಯೊ ಒಲಂಪಿಕ್ಸ್: ಸಾಯಿ ಪ್ರಣೀತ್ ಗೆ ಸೋಲು, ಆರ್ಚರಿ ಮಿಶ್ರ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ

ಒಲಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೋಲು ಅನುಭವಿಸಿದ್ದಾರೆ.
ಸಾಯಿ ಪ್ರಣೀತ್
ಸಾಯಿ ಪ್ರಣೀತ್

ಟೋಕಿಯೊ: ಒಲಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೋಲು ಅನುಭವಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾ ಜೋಡಿ ಆನ್ ಸ್ಯಾನ್ ಮತ್ತು ಕಿಮ್ ಜೇ ಡಿಯೊ ವಿರುದ್ಧ 2-6 ಗೋಲುಗಳಿಂದ ಸೋತ ನಂತರ ಭಾರತದ ಬಿಲ್ಲುಗಾರರಾದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸಿರಾಸೆ ಅನುಭವಿಸಿದರು.

ಅಗ್ರ ಶ್ರೇಯಾಂಕದ ಕೊರಿಯನ್ನರು ಮೊದಲ ಸೆಟ್‌ನ್ನು 35-32ರಿಂದ ಗೆದ್ದರೆ, ದೀಪಿಕಾ ಮತ್ತು ಪ್ರವೀಣ್ ಎರಡು 8 ಎಸ್ ಮತ್ತು 7 ಎಲ್ ಗಳಿಸಿದರು. ಎರಡನೇ ಸೆಟ್‌ನಲ್ಲಿ, ಪ್ರವೀಣ್ ತಮ್ಮ ಎರಡು ಪ್ರಯತ್ನಗಳಲ್ಲಿ ಪರಿಪೂರ್ಣ 10 ಅಂಕಗಳನ್ನು ಪಡೆದರು. ಆದರೆ ದೀಪಿಕಾ ಗುರಿ ತಪ್ಪಿದರು. ಪರಿಣಾಮ ಕೊರಿಯಾ 38-37ರಿಂದ ಒಂದು ಸೆಟ್ ಗೆದ್ದಿತು.

ಎರಡನೇ ಗೇಮ್ ಸಹ ಎದುರಾಳಿ ತಂಡದ ಪಾಲಾಯಿತು. ಆದರೆ, ಮೂರನೇ ಗೇಮ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಜಯ ಸಾಧಿಸಿತು. ನಾಲ್ಕನೇ ಗೇಮ್ ನಲ್ಲಿ ಕೊರಿಯಾ ಆಟಗಾರರು ಗುರಿ ತಪ್ಪದೇ ಅಂಕ ಕಲೆ ಹಾಕಿ ಅಬ್ಬರಿಸಿದರು.

ಭರವಸೆಯ ಆಟಗಾರ ಪ್ರಣೀತ್ ಗೆ ಸೋಲು!
ಟೋಕಿಯೊ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಬಿ ಸಾಯಿ ಪ್ರಣೀತ್ ಒಲಿಂಪಿಕ್ಸ್ ನ ತಮ್ಮ ಮೊದಲ ಗುಂಪು ಪಂದ್ಯದಲ್ಲೇ ಸೋಲು ಅನುಭವಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣೀತ್ 17-21, 15-21 ರಿಂದ ಇಸ್ರೇಲ್ ನ ಮಿಶ್ರಾ ಜಿಲ್ಬರ್ಮನ್ ವಿರುದ್ಧ ಸೋಲು ಕಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com