ಟೋಕಿಯೊ ಒಲಂಪಿಕ್ಸ್: ಮಣಿಕಾ ಬಾತ್ರಾ, ಸುತೀರ್ಥಾ ಮುಖರ್ಜಿ ಎರಡನೇ ಸುತ್ತಿಗೆ

ಟೋಕಿಯೊ ಒಲಂಪಿಕ್ಸ್ ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪದಕ ಭರವಸೆ ಹಾಗೇ ಉಳಿದುಕೊಂಡಿದ್ದು, ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರರಾದ ಮಣಿಕಾ ಬಾತ್ರಾ ಮತ್ತು ಸುತೀರ್ಥಾ ಮುಖರ್ಜಿ...
ಸುತೀರ್ಥಾ ಮುಖರ್ಜಿ - ಮಣಿಕಾ ಬಾತ್ರಾ
ಸುತೀರ್ಥಾ ಮುಖರ್ಜಿ - ಮಣಿಕಾ ಬಾತ್ರಾ

ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪದಕ ಭರವಸೆ ಹಾಗೇ ಉಳಿದುಕೊಂಡಿದ್ದು, ಭಾರತದ ಮಹಿಳಾ ಟೇಬಲ್ ಟೆನಿಸ್ ಆಟಗಾರರಾದ ಮಣಿಕಾ ಬಾತ್ರಾ ಮತ್ತು ಸುತೀರ್ಥಾ ಮುಖರ್ಜಿ ಅವರು ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಣಿಕಾ ಅವರು ಇಂಗ್ಲೆಂಡ್ ನ ಟಿನ್-ಟಿನ್ ಹೋ ಅವರನ್ನು 4-0 (11-7, 11-6, 12-10, 11-9)ರಿಂದ ಸೋಲಿಸಿದರೆ, ಸುತೀರ್ಥಾ ಅವರು ಸ್ವೀಡನ್ ನ ಲಿಂಡಾ ಬರ್ಗ್ ಸ್ಟೋರ್ಮ್ ಅವರನ್ನು 4-3 (11-7, 11-6, 12-10, 11-9). 5-11, 11-9, 11-13, 9-11, 11-3, 11-9, 11-5) ಸೋಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಈ ಗೆಲುವಿನೊಂದಿಗೆ, ಒಲಂಪಿಕ್ಸ್ ನ ಮಹಿಳಾ ಸಿಂಗಲ್ಸ್ ಪಂದ್ಯಾವಳಿಯಲ್ಲಿ 29 ವರ್ಷಗಳಲ್ಲಿ ಮೊದಲ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮಣಿಕಾ ಪಾತ್ರರಾದರು. ಎರಡನೇ ಸುತ್ತಿನಲ್ಲಿ, ಅವರು ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತ ಉಕ್ರೇನ್ ನ ಮಾರ್ಗರಿಟಾ ಪೆಸೊಟ್ಸ್ಕಾ ಅವರನ್ನು ಎದುರಿಸಲಿದ್ದಾರೆ.

ಸುತೀರ್ಥಾ ಮುಖರ್ಜಿ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ನ ಯು ಫೂ ಅವರನ್ನು ಎದುರಿಸಲಿದ್ದಾರೆ.

ಭಾರತೀಯ ಮಿಶ್ರ ಡಬಲ್ಸ್ ಜೋಡಿ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಅವರು ಟೋಕಿಯೊ ಒಲಂಪಿಕ್ಸ್ ನ 16ನೇ ಸುತ್ತಿನಲ್ಲಿ ಚೀನಾದ ತೈಪೆ ತಂಡವಾದ ಲಿನ್ ಯುನ್-ಜು ಮತ್ತು ಚೆಂಗ್ ಐ-ಚಿಂಗ್ ಅವರ ವಿರುದ್ಧ ಸೋತಿರುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com