ಟೋಕಿಯೊ: ಟೋಕಿಯೊ ಒಲಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ವಿಭಾಗದ ಟೇಬಲ್ ಟೆನ್ನಿಸ್‍ನಲ್ಲಿ ಉಕ್ರೇನ್‌ನ ಮಾರ್ಗರಿಟಾ ಪೆಸೊಟ್ಕಾರನ್ನು ಸೋಲಿಸಿ ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯಾವಳಿಯ 2ನೇ ಸುತ್ತಿನಲ್ಲಿ ಬಾತ್ರಾ ಮಾರ್ಗರಿಟಾ ಪೆಸೊಟ್ಸ್ಕಾ ಅವರನ್ನು 4-3 ಸೆಟ್ ಗಳಿಂದ ಸೋಲಿಸಿ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ. ಇಡೀ ಪಂದ್ಯವು 57 ನಿಮಿಷಗಳ ಕಾಲ ನಡೆಯಿತು.
ಮೊದಲ ಸೆಟ್ ಅನ್ನು ಉಕ್ರೇನ್‌ನ ಪೆಸೊಟ್ಸ್ಕಾ ಗೆದ್ದುಕೊಂಡಿದ್ದರು. ಇದು ಮನಿಕಾ ಮೇಲೆ ಬಹಳ ಒತ್ತಡ ಬೀರಿತು. ಆದರೆ ಮತ್ತೆ ಚಿಗರೆಯಂತೆ ಪುಟಿದ್ದೆದ್ದ ಮನಿಕಾ ಉಳಿದ ಮೂರು ಸೆಟ್ ಗಳಲ್ಲಿ ಗೆಲವು ಸಾಧಿಸಿದರು.
ಮಣಿಕಾ ಟೇಬಲ್ ಟೆನಿಸ್‌ನಲ್ಲಿ ಪದಕದ ಆಸೆ ಜೀವಂತವಾಗಿರಿಸಿದ್ದಾರೆ. ಆದರೆ ಅವರ ಉತ್ತಮ ಸಾಧನೆ ಖಂಡಿತವಾಗಿಯೂ ದೇಶದ ಯುವಕರಿಗೆ ಸ್ಫೂರ್ತಿ ನೀಡುತ್ತದೆ.
Advertisement