ಕ್ರೀಡೆ
ಟೋಕಿಯೊ ಒಲಂಪಿಕ್ಸ್: ಬಾಕ್ಸಿಂಗ್ ನಲ್ಲಿ ಅಮೀತ್ ಪಂಗಲ್ ಗೆ ಸೋಲು
ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಗಲ್ ಒಲಿಂಪಿಕ್ಸ್ ಕ್ರೀಡಾ ಕೂಟದ ಪುರುಷರ 52 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ಸ್ ವಿಭಾಗದಲ್ಲಿ ಸೋತು ನಿರಾಸೆ ಅನುಭವಿಸಿದರು.
ಟೋಕಿಯೊ: ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಗಲ್ ಒಲಿಂಪಿಕ್ಸ್ ಕ್ರೀಡಾ ಕೂಟದ ಪುರುಷರ 52 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ಸ್ ವಿಭಾಗದಲ್ಲಿ ಸೋತು ನಿರಾಸೆ ಅನುಭವಿಸಿದರು.
ಶನಿವಾರ ನಡೆದ ಪಂದ್ಯದಲ್ಲಿ ಅಮಿತ್ 1-4 ರಿಂದ ಕೊಲಂಬಿಯಾದ ಯುಬರ್ಜೆನ್ ಮಾರ್ಟಿನೆಜ್ ವಿರುದ್ಧ ಸೋಲು ಕಂಡರು.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಕೊಲಂಬಿಯಾದ ಯುಬರ್ಜೆನ್ ಭರ್ಜರಿ ಆಟದ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು.
ಅಮಿತ್ ಸೋಲಿನೊಂದಿಗೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐದು ಭಾರತೀಯ ಪುರುಷ ಬಾಕ್ಸರ್‌ಗಳಲ್ಲಿ ನಾಲ್ವರು ಹೊರ ನಡೆದಂತಾಗಿದೆ. ಈಗ ಭಾರತದ ಚಿತ್ತ ಸತೀಶ್ ಕುಮಾರ್ ಅವರ ಮೇಲೆ ನೆಟ್ಟಿದೆ. ಇದಕ್ಕೂ ಮೊದಲು ವಿಕಾಸ್ ಕೃಷ್ಣ, ಆಶೀಶ್ ಕುಮಾರ್, ಮನೀಶ್ ಕೌಶಿಕ್ ಸೋಲು ಕಂಡಿದ್ದರು.