ಪ್ಯಾರಿಸ್: ಶುಕ್ರವಾರ ತಡ ರಾತ್ರಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್, ರಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಅಂತಿಮ ಹಂತ ತಲುಪಿದ್ದಾರೆ.
ನೋವಾಕ್ ಜೊಕೋವಿಚ್ ಉಪಾಂತ್ಯ ಪಂದ್ಯದಲ್ಲಿ 3-6, 6-3, 7-6, 6-4 ರಿಂದ ಮೂರನೇ ಶ್ರೇಯಾಂಕದ ರಫೆಲ್ ಅವರನ್ನು ಪರಾಜಯಗೊಳಿಸಿ ಆರನೇ ಬಾರಿ ಫ್ರೆಂಚ್ ಓಪನ್‌ನ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
Advertisement