ಟೋಕಿಯೋ ಒಲಂಪಿಕ್ಸ್ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ರಾಣಿ ರಾಂಪಾಲ್ ಆಯ್ಕೆ

ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ 16 ಸದಸ್ಯರ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಹಿರಿಯ ಸ್ಟ್ರೈಕರ್ ರಾಣಿ ರಾಂಪಾಲ್ ಅವರನ್ನು ಹಾಕಿ ಇಂಡಿಯಾ (ಎಚ್‌ಐ) ಸೋಮವಾರ ಆಯ್ಕೆ ಮಾಡಿದೆ.
ರಾಣಿ ರಾಂಪಾಲ್
ರಾಣಿ ರಾಂಪಾಲ್

ನವದೆಹಲಿ: ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ 16 ಸದಸ್ಯರ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಹಿರಿಯ ಸ್ಟ್ರೈಕರ್ ರಾಣಿ ರಾಂಪಾಲ್ ಅವರನ್ನು ಹಾಕಿ ಇಂಡಿಯಾ (ಎಚ್‌ಐ) ಸೋಮವಾರ ಆಯ್ಕೆ ಮಾಡಿದೆ.

ಭಾರತವು ಕಳೆದ ವಾರ ಟೋಕಿಯೋ ಕ್ರೀಡಾಕೂಟಕ್ಕೆ 16 ಸದಸ್ಯರ ತಂಡವನ್ನು ಘೋಷಿಸಿತ್ತು ಆದರೆ ರಾಣಿ ಅವರೇ ತಂಡವನ್ನು ಮುನ್ನಡೆಸುತ್ತದೆ ಎಂಬುದು ಹೆಚ್ಚು ಕಡಿಮೆ ಖಚಿತವಾಗಿದ್ದರೂ ನಾಯಕಿಯ ಹೆಸರನ್ನು ಘೋಷಿಸಿರಲಿಲ್ಲ,

ಹಾಕಿ ಇಂಡಿಯಾ ಹೇಳಿಕೆ ಪ್ರಕಾರ ರಾಣಿ ತನ್ನ ಅನುಭವದಿಂದ ಮಾತ್ರವಲ್ಲದೆ ತಂಡದ ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಸಹಜ ಸಾಮರ್ಥ್ಯಕ್ಕೂ ಸ್ಪಷ್ಟ ಆಯ್ಕೆಯಾಗಿದ್ದಾರೆ. "ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲು ಇದು ಒಂದು ದೊಡ್ಡ ಗೌರವ.ಈ ಹಿಂದಿನ ವರ್ಷಗಳಲ್ಲಿ ಹಿರಿಯ ಆಟಗಾರಳಾಗಿ ಜವಾಬ್ದಾರಿಗಳನ್ನು ಹಂಚಿಕೊಂಡ ತಂಡದ ಆಟಗಾರರೊಂದಿಗೆ ನಾಯಕಿಯಾಗಿ ನನ್ನ ಪಾತ್ರವನ್ನು ಹೆಚ್ಚಿಸಲಾಗಿದೆ." ಎಂದು ರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಣಿ ನಾಯಕತ್ವದಲ್ಲಿ, ಭಾರತ ತಂಡವು ಕಳೆದ ಕೆಲವು ವರ್ಷಗಳಿಂದ ಗಮನಾರ್ಹ ಫಲಿತಾಂಶಗಳನ್ನು ಗಳಿಸಿದೆ, ಇದರಲ್ಲಿ 2017 ರಲ್ಲಿ ಏಷ್ಯಾಕಪ್ ಗೆಲುವು,  2018 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, 2018 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ 2019 ರ ಎಫ್‌ಐಹೆಚ್ ಸರಣಿ ಫೈನಲ್ ಗೆಲುವು ಸೇರಿದೆ.

ರಾಣಿ ನೇತೃತ್ವದ ತಂಡವು ಮೊದಲ ಬಾರಿಗೆ ಲಂಡನ್‌ನಲ್ಲಿ ನಡೆದ ಎಫ್‌ಐಹೆಚ್ ಮಹಿಳಾ ವಿಶ್ವಕಪ್ 2018 ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಭುವನೇಶ್ವರದಲ್ಲಿ ನಡೆದ ಎಫ್‌ಐಹೆಚ್ ಒಲಿಂಪಿಕ್ ಕ್ವಾಲಿಫೈಯರ್ಸ್‌ನಲ್ಲಿ ಭಾರತದ ಸಾಧನೆಯ ಮಹತ್ವದ ಭಾಗವಾಗಿದ್ದವರು ಇದೇ ರಾಣಿ.

ಹಾಕಿ ಇಂಡಿಯಾ ಡೀಪ್ ಗ್ರೇಸ್ ಎಕ್ಕಾ ಮತ್ತು ಅನುಭವಿ ಗೋಲ್ ಕೀಪರ್ ಸವಿತಾ ಅವರನ್ನುಮಹಿಳಾ ತಂಡದ ಇಬ್ಬರು ಉಪನಾಯಕಿಯರನ್ನಾಗಿ ಹೆಸರಿಸಿದೆ. ಇಬ್ಬರೂ ಆಟಗಾರರು ಸುಮಾರು ಒಂದು ದಶಕದಿಂದ ಭಾರತೀಯ ತಂಡದಲ್ಲಿದ್ದಾರೆ. ಅಲ್ಲದೆ ಎಫ್‌ಐಹೆಚ್ ಮಹಿಳಾ ವಿಶ್ವಕಪ್‌ನಲ್ಲಿ ಪ್ರಮುಖ  ಪ್ರದರ್ಶನ ನೀಡಿದ ನಂತರ ಅವರು 2018 ರಲ್ಲಿ ವಿಶ್ವದ 9 ನೇ ಶ್ರೇಯಾಂಕವನ್ನು ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com