ಒಲಿಂಪಿಕ್ ನಲ್ಲಿ ಭಾರತ ಹಾಕಿ ತಂಡ ಮುನ್ನಡೆಸಲಿರುವ ಮನ್‌ಪ್ರೀತ್

ಟೋಕಿಯ ಒಲಿಂಪಿಕ್ಸ್‌ಗಾಗಿ 16 ಸದಸ್ಯರ ಭಾರತೀಯ ಹಾಕಿ ತಂಡದ ನಾಯಕರಾಗಿ ಹಿರಿಯ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರನ್ನು ಹಾಕಿ ಇಂಡಿಯಾ ಮಂಗಳವಾರ ನೇಮಕ ಮಾಡಿದೆ.
ಮನ್‌ಪ್ರೀತ್ ಸಿಂಗ್
ಮನ್‌ಪ್ರೀತ್ ಸಿಂಗ್
Updated on

ನವದೆಹಲಿ: ಟೋಕಿಯ ಒಲಿಂಪಿಕ್ಸ್‌ಗಾಗಿ 16 ಸದಸ್ಯರ ಭಾರತೀಯ ಹಾಕಿ ತಂಡದ ನಾಯಕರಾಗಿ ಹಿರಿಯ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರನ್ನು ಹಾಕಿ ಇಂಡಿಯಾ ಮಂಗಳವಾರ ನೇಮಕ ಮಾಡಿದೆ.

ತಂಡದ ನಾಯಕತ್ವದ ಗುಂಪಿನ ಭಾಗವಾಗಿರುವ ಅನುಭವಿ ರಕ್ಷಕಣಾ ವಿಭಾಗದ ಆಟಗಾರ ಬೀರೇಂದ್ರ ಲಕ್ರಾ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಹಾಕಿ ಇಂಡಿಯಾ ತಂಡದ ಉಪನಾಯಕರನ್ನಾಗಿ ನೇಮಿಸಿದೆ.

"... ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಈ ಅವಕಾಶವನ್ನು ತಂಡ ಕ್ಯಾಪ್ಟನ್ ಆಗಿ ಪಡೆದಿರುವುದು ನನಗೆ ಸಂತಸದ ವಿಚಾರವಾಗಿದೆ. ಈ ಗೌರವವನ್ನು  ನನಗೆ ನೀಡಲಾಗಿರುವುದು ಬಹಳ ಹೆಮ್ಮೆಯ ಕ್ಷಣವಾಗಿದೆ" ಎಂದು ಮನ್‌ಪ್ರೀತ್ ಹೇಳಿದ್ದಾರೆ.

"ಕಳೆದ ಕೆಲವು ವರ್ಷಗಳಿಂದ, ನಾವು ಬಲವಾದ ನಾಯಕತ್ವದ ತಂಡವಾಗಿದ್ದೇವೆ. ಸಾಂಕ್ರಾಮಿಕ ರೋಗವು ಎದುರಿಸುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಜಯಿಸಿದ್ದೇವೆ ಮತ್ತು ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡುವತ್ತ ನಮ್ಮ ಮನಸ್ಸು ಮತ್ತು ಫಿಟ್‌ನೆಸ್ ಅನ್ನು ಕೇಂದ್ರೀಕರಿಸಿದ್ದೇವೆ."  ಮಿಡ್-ಫೀಲ್ಡರ್ ನಾಯಕತ್ವದಲ್ಲಿ, ಭಾರತ ತಂಡವು 2017 ರಲ್ಲಿ ಏಷ್ಯಾ ಕಪ್ ವಿಜಯ ಸಾಧಿಸಿದ್ದು,  2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಪಡೆದುಕೊಳ್ಳುವುದರ ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ 2019 ರಲ್ಲಿ ಎಫ್‌ಐಹೆಚ್ ಸರಣಿ ಫೈನಲ್ ಗೆದ್ದಿರುವುದು ಸೇರಿದಂತೆ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ.

ಭಾರತವು ಭುವನೇಶ್ವರದಲ್ಲಿ ನಡೆದ 2018 ರ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಿತು ಮತ್ತು ಕೋವಿಡ್  ಸಾಂಕ್ರಾಮಿಕ ಪ್ರಾರಂಭಕ್ಕೆ ಮುನ್ನ  ಮನ್‌ಪ್ರೀತ್ ನೇತೃತ್ವದ ಎಫ್‌ಐಹೆಚ್ ಹಾಕಿ ಪ್ರೊ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು.

ಇದು ಮನ್‌ಪ್ರೀತ್‌ರ ಮೂರನೇ ಒಲಿಂಪಿಕ್ ಕ್ರೀಡಾಕೂಟವಾಗಲಿದೆ ಮತ್ತು ಅವರ ನಾಯಕತ್ವದಲ್ಲಿ ತಂಡವು ತನ್ನ ವಿಶ್ವ ಶ್ರೇಯಾಂಕವನ್ನು ಇದೀಗ 4 ನೇ ಸ್ಥಾನಕ್ಕೆ ತಲುಪಿದೆ.

ಬಿರೆಂದರ್ ಮತ್ತು ಮನ್‌ಪ್ರೀತ್ ಅನುಭವಿ ಆಟಗಾರರು. ಬಿರೆಂದರ್ ಅವರು 2012 ರ ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಒಂದು ಭಾಗವಾಗಿದ್ದರು. ಆದರೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಯಿಂದಾಗಿ 2016 ರಲ್ಲಿ ರಿಯೊ ಒಲಿಂಪಿಕ್ಸ್‌ ತಪ್ಪಿಸಿಕೊಂಡಿದ್ದರು. ಆದರೆ ಗಾಯದಿಂದಾಗಿ ವಿರಾಮದ ನಂತರ ತಂಡಕ್ಕೆ ಮರಳಿದಾಗಿನಿಂದ, ಬಿರೆಂದರ್ ಉತ್ತಮ ಪ್ರದರ್ಶನ ನೀಡಿದ್ದಾರೆ. 2019 ರಲ್ಲಿ, ನಾಯಕ ಮನ್‌ಪ್ರೀತ್ ಅನುಪಸ್ಥಿತಿಯಲ್ಲಿ, ಟೋಕಿಯೊದಲ್ಲಿ ನಡೆದ ಎಫ್‌ಐಹೆಚ್ ಒಲಿಂಪಿಕ್ ಟೆಸ್ಟ್ ಸ್ಪರ್ಧೆಯಲ್ಲಿ ಹರ್ಮನ್‌ಪ್ರೀತ್ ಭಾರತೀಯ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಮೂವರು ಆಟಗಾರರನ್ನು ಅಭಿನಂದಿಸಿದ ಭಾರತೀಯ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ ಗ್ರಹಾಂ ರೀಡ್, "ಈ ಮೂವರು ಆಟಗಾರರು ನಾಯಕತ್ವದ ಅವಿಭಾಜ್ಯ ಅಂಗವಾಗಿದ್ದಾರೆ. ಈ ಮೂವರು ಈ ಸವಾಲಿನ ಸಮಯದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುವಲ್ಲಿ ಹೆಚ್ಚಿನ ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಇಬ್ಬರು ಉಪನಾಯಕರನ್ನು ಆಯ್ಕೆ ಮಾಡುವುದು ಪಂದ್ಯಾವಳಿಯಲ್ಲಿ ನಮ್ಮ ನಾಯಕತ್ವವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದಿದ್ದಾರೆ.

ಒಲಿಂಪಿಕ್ಸ್‌ಗೆ ಹೋಗುವ ಭಾರತ ಪುರುಷರ ತಂಡದ ನಾಯಕನಾಗಿ ಆಯ್ಕೆಯಾದ ಬಗ್ಗೆ ಮನ್‌ಪ್ರೀತ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, “ಒಲಿಂಪಿಕ್ಸ್ ನಿಜಕ್ಕೂ ವಿಶೇಷವಾಗಲಿದೆ. ಈ ಬಾರಿ ಮೂರನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ನನಗೆ ಸಂತೋಷವಾಗಿದೆ. ನಾಯಕತ್ವ ಜವಾಬ್ದಾರಿಯನ್ನು ನನಗೆ ನೀಡಲಾಗಿರುವುದು ಬಹಳ ಹೆಮ್ಮೆಯ ಕ್ಷಣವಾಗಿದೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com