ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ತೇಜಿಂದರ್‌ಪಾಲ್ ಸಿಂಗ್ 

ಶಾಟ್ ಪುಟ್ ಅಥ್ಲೀಟ್ ತೇಜಿಂದರ್‌ಪಾಲ್ ಸಿಂಗ್ ತೂರ್ ಎನ್‌ಐಎಸ್ ಪಟಿಯಾಲದಲ್ಲಿ ನಡೆದ 4 ನೇ ಭಾರತೀಯ ಗ್ರ್ಯಾಂನ್ ಪ್ರಿಕ್ಸ್‌ನಲ್ಲಿ ಏಷ್ಯಾದ ದಾಖಲೆಯನ್ನು ಮುರಿಯುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ತೇಜಿಂದರ್‌ಪಾಲ್ ಸಿಂಗ್
ತೇಜಿಂದರ್‌ಪಾಲ್ ಸಿಂಗ್
Updated on

ಪಟಿಯಾಲ: ಶಾಟ್ ಪುಟ್ ಅಥ್ಲೀಟ್ ತೇಜಿಂದರ್‌ಪಾಲ್ ಸಿಂಗ್ ತೂರ್ ಎನ್‌ಐಎಸ್ ಪಟಿಯಾಲದಲ್ಲಿ ನಡೆದ 4 ನೇ ಭಾರತೀಯ ಗ್ರ್ಯಾಂನ್ ಪ್ರಿಕ್ಸ್‌ನಲ್ಲಿ ಏಷ್ಯಾದ ದಾಖಲೆಯನ್ನು ಮುರಿಯುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಏಷ್ಯನ್ ಗೇಮ್ಸ್ ಚಾಂಪಿಯನ್ ನಲ್ಲಿ ಸೋಮವಾರ 21.49 ಮೀಟರ್ ಶಾಟ್ ಪುಟ್ ಎಸೆದು ಒಲಿಂಪಿಕ್ ಟಿಕೆಟ್ ಪಡೆದರು. ಶಾಟ್ ಪುಟ್‌ನಲ್ಲಿ ಒಲಿಂಪಿಕ್ ಅರ್ಹತೆ ಪಡೆಯಲು 21.10 ಮೀಟರ್ ಎಸೆಯಬೇಕಿತ್ತು.

2009 ರಲ್ಲಿ ದೋಹಾದಲ್ಲಿ ಸೌದಿ ಅರೇಬಿಯಾದ ಸುಲ್ತಾನ್ ಅಬ್ದುಲ್ಮಜೀದ್ ಅಲ್-ಹೆಬ್ಶಿ ಅವರು ಸ್ಥಾಪಿಸಿದ 21.13 ಮೀಟರ್ ಓಟದ ದಾಖಲೆಯನ್ನು ತೇಜಿಂದರ್‌ಪಾಲ್  ದಾಖಲೆ ಇನ್ನಷ್ಟು  ಉತ್ತಮಗೊಳಿಸಿದೆ.

ಅವರ 20.92 ಮೀಟರ್ ದಾಖಲೆಯು  2019 ರಲ್ಲಿ ನಡೆದ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಆಗಿತ್ತು.

ಇನ್ನು ಮಹಿಳಾ ರಿಲೇ ತಂಡವು ತನ್ನದೇ ಆದ ದಾಖಲೆಯ ಪ್ರಯತ್ನದ ಹೊರತಾಗಿಯೂ ಒಲಿಂಪಿಕ್ ಅರ್ಹತಾ ಆವರಣದಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 4x100 ಮೀಟರ್ ರಿಲೇಯಲ್ಲಿ ಹದಿನಾರು ತಂಡಗಳು ಭಾಗವಹಿಸಲಿದ್ದು, ಅದರಲ್ಲಿ 14 ತಂಡಗಳು ಅರ್ಹತೆ ಪಡೆದಿವೆ. ಉಳಿದ ಎರಡು ತಂಡಗಳನ್ನು ಶ್ರೇಯಾಂಕದ ಮೂಲಕ ನಿರ್ಧರಿಸಲಾಗುತ್ತದೆ.

ಏತನ್ಮಧ್ಯೆ, ಒಲಿಂಪಿಕ್-ಬೌಂಡ್ ಕಮಲಜೀತ್ ಕೌರ್  ಕಬ್ಬಿಣದ ಡಿಸ್ಕ್ ಅನ್ನು 66.59 ಮೀಟರ್ ದೂರಕ್ಕೆ ಎಸೆಯುವ ಮೂಲಕ ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನುಉತ್ತಮಪಡಿಸಿಕೊಂಡಿದ್ದಾರೆ. ಆದರೆ ಅವರು ಒಬ್ಬರೇ ಈ ಪ್ರದರ್ಶನ ನೀಡಿದ್ದರಿಂದ ಹೊಸ ರಾಷ್ಟ್ರೀಯ ದಾಖಲೆಯೆಂದು ಪರಿಗಣಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಕನಿಷ್ಠ ಮೂರು ಕ್ರೀಡಾಪಟುಗಳು ಭಾಗವಹಿಸಬೇಕೆಂದು ನಿಯಮಗಳು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com