
ಪ್ಯಾರೀಸ್: ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆದ ಮೆಗಾ-ಈವೆಂಟ್ ಅರ್ಚರಿ ವಿಶ್ವಕಪ್ ನ ಹಂತ 3 ರಲ್ಲಿ ದೀಪಿಕಾ ಕುಮಾರಿ. ಭಾನುವಾರ ಒಂದೇ ದಿನ ಮೂರು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು 6-0 ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಇದಕ್ಕೆ ಮುನ್ನ ಅವರು ಚಿನ್ನ ಗೆದ್ದ ಮಿಶ್ರ ಹಾಗೂ ಮಹಿಳಾ ತಂಡಗಳ ಭಾಗವಾಗಿದ್ದರು.
ಮಿಶ್ರ ಫೈನಲ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿ ಅರ್ಚರಿಯಲ್ಲಿ್ ಭಾರತದ ಅತ್ಯುತ್ತಮ ಪದಕ ಭರವಸೆಯಿರುವ ದೀಪಿಕಾ ಮತ್ತು ಅವರ ಪತಿ ಅಟಾನು ದಾಸ್ ನೆದರ್‌ಲ್ಯಾಂಡ್‌ನ ಜೋಡಿಯನ್ನು 5-3ರಿಂದ ಹಿಮ್ಮೆಟ್ಟಿಸಿದರು.
ದೀಪಿಕಾ, ಅಂಕಿತಾ ಭಕತ್ ಮತ್ತು ಕೋಮಲಿಕಾ ಬ್ಯಾರಿ ಅವರ ಮಹಿಳಾ ತಂಡ ಮೆಕ್ಸಿಕೊ ವಿರುದ್ಧ ಆರಾಮದಾಯಕ ಗೆಲುವಿನೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದೆ.
ಇದಕ್ಕೆ ಮುನ್ನ ಅಭಿಷೇಕ್ ವರ್ಮಾ ಅವರು ಜೂನ್ 26 ರಂದು ವೈಯಕ್ತಿಕ ಸ್ಪರ್ಧೆಯಲ್ಲಿ ಜಯಗಳಿಸುವುದರೊಂದಿಗೆ ಭಾರತದ ಚಿನ್ನದ ಬೇಟೆ ಪ್ರಾರಂಭವಾಗಿತ್ತು.
Advertisement