ಅರ್ಜುನ ಪ್ರಶಸ್ತಿಗೆ ಅಂಕಿತಾ ರೈನಾ, ಪ್ರಜ್ನೇಶ್ ಗುನ್ನೇಶ್ವರನ್ ಹೆಸರು ಶಿಫಾರಸು ಮಾಡಿದ ಎಐಟಿಎ

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಅಂಕಿತಾ ರೈನಾ ಮತ್ತು ಪ್ರಜ್ನೇಶ್ ಗುನ್ನೇಶ್ವರನ್ ಅವರನ್ನು ರಾಷ್ಟ್ರೀಯ ಟೆನಿಸ್ ಫೆಡರೇಶನ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. 
ಪ್ರಜ್ನೇಶ್ ಗುನ್ನೇಶ್ವರನ್
ಪ್ರಜ್ನೇಶ್ ಗುನ್ನೇಶ್ವರನ್

ನವದೆಹಲಿ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಅಂಕಿತಾ ರೈನಾ ಮತ್ತು ಪ್ರಜ್ನೇಶ್ ಗುನ್ನೇಶ್ವರನ್ ಅವರನ್ನು ರಾಷ್ಟ್ರೀಯ ಟೆನಿಸ್ ಫೆಡರೇಶನ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. 

ಇದೇ ವೇಳೆ ಧ್ಯಾಂಚಂದ್ ಗೌರವಕ್ಕಾಗಿ ಬಲರಾಮ್ ಸಿಂಗ್ ಮತ್ತು ಎನ್ರಿಕೊ ಪಿಪೆರ್ನೊ ಅವರ ಹೆಸರನ್ನು ಸಹ ಕಳುಹಿಸಿದೆ.

ಜಕಾರ್ತಾ ಮತ್ತು ಪಾಲೆಂಬಾಂಗ್‌ನಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಅಂಕಿತಾ ಮತ್ತು ಪ್ರಜ್ನೇಶ್ ಇಬ್ಬರೂ ಸಿಂಗಲ್ಸ್ ಕಂಚಿನ ಪದಕ ಗೆದ್ದಿದ್ದರು. ಅಂಕಿತಾ ಈಗ ದೇಶದ ಅತ್ಯುತ್ತಮ ಶ್ರೇಯಾಂಕಿತ ಸಿಂಗಲ್ಸ್(182) ಮತ್ತು ಡಬಲ್ಸ್(95) ಆಟಗಾರ್ತಿಯಾಗಿದ್ದು, ಮುಂದಿನ ತಿಂಗಳು ಟೋಕಿಯೊ ಕ್ರೀಡಾಕೂಟದಲ್ಲಿ ಒಲಿಂಪಿಕ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಈ ವರ್ಷ ನಾವು ಅರ್ಜುನ ಪ್ರಶಸ್ತಿಗೆ ಅಂಕಿತಾ ಮತ್ತು ಪ್ರಜ್ನೇಶ್ ಅವರನ್ನು ನಾಮನಿರ್ದೇಶನ ಮಾಡಿದ್ದೇವೆ ಮತ್ತು ಅತ್ಯಂತ ಗೌರವಾನ್ವಿತ ಬಲ್ರಾಮ್ ಸರ್ ಮತ್ತು ಎನ್ರಿಕೊ ಪಿಪೆರ್ನೊ ಅವರ ಹೆಸರನ್ನು ಜೀವಮಾನದ ಸಾಧನೆ ಗೌರವ ಧ್ಯಾನ್‌ಚಂದ್‌ ಪ್ರಶಸ್ತಿಗೆ ಕಳುಹಿಸಲಾಗಿದೆ ಎಂದು ಆಲ್ ಇಂಡಿಯನ್ ಟೆನಿಸ್ ಅಸೋಸಿಯೇಶನ್‌ನ (ಎಐಟಿಎ) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com