ಒಲಿಂಪಿಕ್ಸ್ ಅರ್ಹತೆ ಪಡೆದ ಕುಸ್ತಿಪಟು ಸುಮಿತ್ ಮಲಿಕ್

ಭಾರತದ ಫ್ರೀಸ್ಟೈಲ್ ಕುಸ್ತಿಪಟು ಸುಮಿತ್ ಮಲಿಕ್ ಅವರು 125 ಕೆ.ಜಿ. ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಸುಮಿತ್ ಮಲಿಕ್
ಸುಮಿತ್ ಮಲಿಕ್

ನವದೆಹಲಿ: ಭಾರತದ ಫ್ರೀಸ್ಟೈಲ್ ಕುಸ್ತಿಪಟು ಸುಮಿತ್ ಮಲಿಕ್ ಅವರು 125 ಕೆ.ಜಿ. ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್ ಅರ್ಹತೆಯ ಕೊನೆಯ ಹಂತವಾದ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯಾವಳಿಯಲ್ಲಿ, ಆರು ವಿಭಾಗದಲ್ಲಿ ಭಾರತವು ಸ್ಪರ್ಧಿಸಿತ್ತು. 74 ಕೆಜಿಯಲ್ಲಿ ಅಮಿತ್ ಧನ್ಖರ್, 97 ಕೆಜಿಯಲ್ಲಿ ಸತ್ಯವ್ರತ್ ಕಡಿಯಾನ್ ಮತ್ತು 125 ಕೆಜಿಯಲ್ಲಿ ಸುಮಿತ್ ಮೈದಾನಕ್ಕಿಳಿದಿದ್ದರು.

ಅಮಿತ್ ತಮ್ಮ ಮೊದಲ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದರು. 97 ಕೆ.ಜಿ.ಯಲ್ಲಿ ಕ್ವಾರ್ಟರ್‌ ಫೈನಲ್ಸ್ ನಲ್ಲಿ ಸತ್ಯವ್ರತ್ ಕಡಿಯನ್ ಸೋತರು ಮತ್ತು ಸ್ಪರ್ಧೆಯಿಂದ ಹೊರಗುಳಿದರು.

ಸುಮಿತ್ 125 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಫೈನಲ್‌ನಲ್ಲಿ ಅವರು ರಷ್ಯಾದ ಕುಸ್ತಿಪಟು ಸೆರ್ಗೆಲ್ ಕೊಜಿರೆವ್ ಅವರನ್ನು ಎದುರಿಸಲಿದ್ದಾರೆ.

ಅರ್ಹತಾ ಸುತ್ತಿನಲ್ಲಿ, ಸುಮಿತ್ ಕಿರ್ಗಿಸ್ತಾನ್‌ನ ಕುಸ್ತಿಪಟುವನ್ನು 2–2ರಿಂದ ಸೋಲಿಸಿದರು. ನಂತರ ಅವರು ಮೊಲ್ಡೊವಾ ಕುಸ್ತಿಪಟುವನ್ನು 2–2ರಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸುಮಿತ್ 10-5ರಲ್ಲಿ ತಜಿಕಿಸ್ತಾನ್‌ನ ಕುಸ್ತಿಪಟು ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು.

ಸೆಮಿಫೈನಲ್ಸ್ ನಲ್ಲಿ ಅವರು ವೆನೆಜುವೆಲಾದ ಕುಸ್ತಿಪಟುವನ್ನು 5–0ರಿಂದ ಸೋಲಿಸಿ ಫೈನಲ್‌ಗೆ ತಲುಪಿದರು. ಇದರೊಂದಿಗೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com