ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ರಮೇಶ್ ಪೊವಾರ್ ನೇಮಕ

ಟೀಮ್ ಇಂಡಿಯಾದ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಮತ್ತೆ ನೇಮಕ ಮಾಡಲಾಗಿದೆ.
ರಮೇಶ್ ಪೊವಾರ್
ರಮೇಶ್ ಪೊವಾರ್

ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಮತ್ತೆ ನೇಮಕ ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಪೊವಾರ್ ಈ ಹಿಂದೆ 2018 ಜುಲೈ ನಿಂದ 2018 ನವೆಂಬರ್ ವರೆಗೂ ಮಹಿಳಾ ತಂಡದ ಕೋಚ್ ಆಗಿದ್ದರು.

ಬಿಸಿಸಿಐ ಗುರುವಾರ ಈ ಮಾಹಿತಿಯನ್ನು ನೀಡಿದೆ. ಡಬ್ಲ್ಯೂವಿ ರಾಮನ್ ಅವರ ಬದಲಿಗೆ ಪೊವರ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ವರ್ಷ ಮಾರ್ಚ್ 8 ರಂದು ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ ನಲ್ಲಿ ರಾಮನ್ ಅವರ ಕೋಚ್ ಅಡಿಯಲ್ಲಿ ಭಾರತ ಫೈನಲ್ ತಲುಪಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅವರು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ರಾಮನ್ ಟ್ವಿಟರ್ ಮೂಲಕ ಪೊವಾರ್ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com