ರೋಮ್: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ ನಡಾಲ್ 6-3, 6-4 ರಿಂದ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೆಂಟರ್ ಕೋರ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿದರು. ಇವರು ಸುಮಾರು ಎರಡು ಗಂಟೆಗಳ ಕಾಲ ನಡೆದ ಪೈಪೋಟಿಯಲ್ಲಿ ಗೆಲುವಿನ ನಗೆ ಬೀರಿದರು. ಅಲ್ಲದೆ ಒಂದು ವಾರದ ಹಿಂದೆ ನಡೆದಿದ್ದ ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಅಲೆಕ್ಸಾಂಡರ್ ವಿರುದ್ಧ ಸೋಲಿಗೆ ಪೆಟ್ಟು ನೀಡಿದರು.
ಕ್ವಾರ್ಟರ್ ಫೈನಲ್ ಗೆ ಜೋಕೊವಿಚ್
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ ಸರ್ಬಿಯಾದ ನೋವಾಕ್ ಜೋಕೊವಿಚ್ ಅವರು ಇಟಾಲಿಯನ್ ಓಪನ್ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆದಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಜೋಕೊ 6-2, 6-1 ಎರಡು ನೇರ ಸೆಟ್ ಗಳಲ್ಲಿ ಸ್ಪೇನ್ ನ ಅಲೆಜಾಂಡ್ರೊ ಡೇವಿಡೋವಿಚ್ ಫೋಕಿನಾ ಅವರನ್ನು ಒಂದು ಗಂಟೆ 10 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
Advertisement