ರೋಮ್: ಸ್ಟಾರ್ ಟೆನಿಸ್ ಆಟಗಾರರಾದ ಸರ್ಬಿಯಾದ ನೋವಾಕ್ ಜೋಕೊವಿಚ್ ಹಾಗೂ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಸೆಣೆಸಿದ್ದು ನಡಾಲ್ ವಿಶ್ವದ ನಂ .1 ಆಟಗಾರನನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿ ಫೈನಲ್ಸ್ ನಲ್ಲಿ ನಡಾಲ್ 7-5, 1-6, 6-3 ಸೆಟ್‌ಗಳಿಂದ ಜೋಕೊವಿಚ್ ಅವರನ್ನು ಮಣಿಸಿದರು.
ಈ ಜಯದೊಡನೆ ನಡಾಲ್ ಎರಡು ವಾರಗಳಲ್ಲಿ ಪ್ರಾರಂಭವಾಗುವ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ತಮ್ಮ 14 ನೇ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಕಳೆದ ವರ್ಷದ ರೋಲ್ಯಾಂಡ್ ಗ್ಯಾರೊಸ್ ಫೈನಲ್‌ನಲ್ಲಿ ನಡಾಲ್ ಜೋಕೊವಿಚ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು.
Advertisement