ಏಷ್ಯನ್ ಚಾಂಪಿಯನ್‌ಶಿಪ್: ಸಾಕ್ಷಿಗೆ ಸೋಲು, ಮೇರಿ ಕೋಮ್ ಸೇರಿ ನಾಲ್ವರು ಫೈನಲ್ಸ್ ಗೆ ಲಗ್ಗೆ

ತನ್ನ ಪ್ರತಿಸ್ಪರ್ಧಿ, ಅಗ್ರ ಶ್ರೇಯಾಂಕಿತ ಕಝಕಿಸ್ತ್ತಾನದ ಡಿನಾ ಝೋಲಾಮನ್ ಅವರಿಗೆ ಮಣಿದ ಭಾರತೀಯ ಬಾಕ್ಸರ್ ಸಾಕ್ಷಿ ಚೌಧರಿ (54 ಕೆಜಿ) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. 
ಏಷ್ಯನ್ ಚಾಂಪಿಯನ್‌ಶಿಪ್: ಸಾಕ್ಷಿಗೆ ಸೋಲು, ಮೇರಿ ಕೋಮ್ ಸೇರಿ ನಾಲ್ವರು ಫೈನಲ್ಸ್ ಗೆ ಲಗ್ಗೆ

ತನ್ನ ಪ್ರತಿಸ್ಪರ್ಧಿ, ಅಗ್ರ ಶ್ರೇಯಾಂಕಿತ ಕಝಕಿಸ್ತ್ತಾನದ ಡಿನಾ ಝೋಲಾಮನ್ ಅವರಿಗೆ ಮಣಿದ ಭಾರತೀಯ ಬಾಕ್ಸರ್ ಸಾಕ್ಷಿ ಚೌಧರಿ (54 ಕೆಜಿ) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸಾಕ್ಷಿ 3-2ರಿಂದ ಮೇಲುಗೈ ಸಾಧಿಸಿದ್ದರು ಆದರೆ ಅಂತಿಮ ಸುತ್ತಿನಲ್ಲಿ ಕಝಕಿಸ್ತಾನದ ಸ್ಪರ್ಧಿ ಎದುರು ಸೋಲುಂಡರು.

ಗುರುವಾರ ತಡರಾತ್ರಿ ದಿನದ ಕಡೆಯಲ್ಲಿ  ಹೊರಬಂದ ಅಧಿಕೃತ ಫಲಿತಾಂಶದ ಪಟ್ಟಿಯಲ್ಲಿ ಕಝಕಿಸ್ತಾನದ ಝೋಲಾಮನ್ ವಿಜೇತರೆಂದು ಪ್ರಕಟಿಸಲಾಗಿದೆ. ಈ ಫಲಿತಾಂಶಾ ಬೌಟ್ ರಿವ್ಯೂ ಸಿಸ್ಟಮ್ ಮೂಲಕ ಹೊರಬಿದ್ದದ್ದು ವಿಶೇಷವಾಗಿದೆ.ಬೌಟ್ ರಿವ್ಯೂ ಸಿಸ್ಟಮ್ ಅನ್ನು ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ​​(ಎಐಬಿಎ) 2019 ರಲ್ಲಿ ಪರಿಚಯಿಸಿತು. ಈ ವ್ಯವಸ್ಥೆಯಲ್ಲಿ 5-0 ಅಥವಾ 4-1 ಅಂಕಗಳೊಂದಿಗೆ ನಿರ್ಧಾರಗಳನ್ನು ಪರಿಶೀಲಿಸಲಾಗುವುದಿಲ್ಲ. ಪ್ರತಿ ತಂಡಕ್ಕೆ ಎರಡು ರಿವ್ಯೂಗೆ ಅವಕಾಶ ಕೊಡಲಾಗುವುದು. ತೀರ್ಪುಗಾರರ ತೀರ್ಮಾನವು ಸರ್ವಾನುಮತದಿಂದ ಇರಬೇಕು ಮತ್ತು ಅದು ಅಂತಿಮ.

ಇದರೊಂದಿಗೆ, ಫೈನಲ್‌ನಲ್ಲಿ ಭಾರತೀಯ ಮಹಿಳಾ ಬಾಕ್ಸರ್‌ಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ.ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ), ಲಾಲ್ಬುವಾತ್ಸೈಹಿ (64 ಕೆಜಿ), ಪೂಜಾ ರಾಣಿ (75 ಕೆಜಿ) ಮತ್ತು ಅನುಪಮಾ (+ 81 ಕೆಜಿ) ಗುರುವಾರ ತಮ್ಮ ಪಂದ್ಯಗಳನ್ನು ಗೆದ್ದ ನಂತರ ಫೈನಲ್‌ಗೆ ಪ್ರವೇಶಿಸಿದರು. ಈ ಪೈಕಿ, ಪೂಜಾ ಎದುರಾಳಿಯು ಸ್ಪರ್ಧೆಯಿಂದ ಹೊರಬಂದ ನಂತರ ವಾಕ್ ಓವರ್ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com