ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಒಲಂಪಿಕ್ಸ್ ಕನಸು ಭಗ್ನ

ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಹಾಗೂ ಅರ್ಹತಾ ಅವಧಿಯೊಳಗೆ ಯಾವುದೇ ಪಂದ್ಯಾವಳಿ ನಡೆಯುವುದಿಲ್ಲ ಎಂದು ಬಿಡಬ್ಲ್ಯುಎಫ್ ಸ್ಪಷ್ಟಪಡಿಸಿದ ನಂತರ ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಟೋಕಿಯೊ ಒಲಂಪಿಕ್ಸ್ ಕನಸು ಭಗ್ನವಾಗಿದೆ.
ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್
ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್
Updated on

ನವದೆಹಲಿ: ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಹಾಗೂ ಅರ್ಹತಾ ಅವಧಿಯೊಳಗೆ ಯಾವುದೇ ಪಂದ್ಯಾವಳಿ ನಡೆಯುವುದಿಲ್ಲ ಎಂದು ಬಿಡಬ್ಲ್ಯುಎಫ್ ಸ್ಪಷ್ಟಪಡಿಸಿದ ನಂತರ ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಟೋಕಿಯೊ ಒಲಂಪಿಕ್ಸ್ ಕನಸು ಭಗ್ನವಾಗಿದೆ.

ಕೋವಿಡ್  19 ಸಾಂಕ್ರಾಮಿಕ ರೋಗದಿಂದಾಗಿ ಸಿಂಗಾಪುರದಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಕೊನೆಯ ಪಂದ್ಯಗಳು ರದ್ದುಗೊಂಡಾಗ ಮಾಜಿ ವಿಶ್ವದ ನಂ.1 ಶ್ರೀಕಾಂತ್ ಮತ್ತು ಲಂಡನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸೈನಾ ಅವರ ಭರವಸೆಗಳು ಹುಸಿಯಾಗಿದೆ. "ಟೋಕಿಯೋ 2020 ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಅವಧಿಯೊಳಗೆ ಯಾವುದೇ ಪಂದ್ಯಾವಳಿಗಳನ್ನು ಆಡಲಾಗುವುದಿಲ್ಲ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಖಚಿತಪಡಿಸುತ್ತದೆ" ಎಂದು ಉನ್ನತ ಮೂಲಗಳು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. 

"ಅದರಂತೆ, ಪರಿಷ್ಕೃತ ಟೋಕಿಯೊ 2020 ಅರ್ಹತಾ ವ್ಯವಸ್ಥೆಯ ಪ್ರಕಾರ ಅರ್ಹತಾ ಅವಧಿ 15 ಜೂನ್ 2021 ರಂದು ಅಧಿಕೃತವಾಗಿ ಮುಚ್ಚಲ್ಪಡುತ್ತದೆ, ಪ್ರಸ್ತುತ ಶ್ರೇಯಾಂಕಗಳ ಪಟ್ಟಿಯು ಬದಲಾಗುವುದಿಲ್ಲ."

ಆರೋಗ್ಯ ಬಿಕ್ಕಟ್ಟಿನಿಂದಾಗಿ ಈ ಮುನ್ನ ಅರ್ಹತಾ ಅವಧಿಯನ್ನು ಪರಿಷ್ಕರಿಸಿದ್ದು, ಮೂರು ಪ್ರಮುಖ ಪಂದ್ಯಾವಳಿಗಳನ್ನು ಮುಂದೂಡಿದ ನಂತರ ಅದನ್ನು ಜೂನ್ 15 ರವರೆಗೆ ಸುಮಾರು ಎರಡು ತಿಂಗಳವರೆಗೆ ವಿಸ್ತರಿಸಿದೆ. ಆದಾಗ್ಯೂ, ಸಾಂಕ್ರಾಮಿಕ ರೋಗದಿಂದ ಯಾವುದೇ ಬಿಡುವು ನೀಡದೆ, ಕೊನೆಯ ಮೂರು ಅರ್ಹತಾ ಪಂದ್ಯಗಳಾದ ಇಂಡಿಯಾ ಓಪನ್, ಮಲೇಷ್ಯಾ ಓಪನ್ ಮತ್ತು ಸಿಂಗಾಪುರ್ ಓಪನ್ ಅನ್ನು ರದ್ದುಗೊಳಿಸಲು ಅಥವಾ ಮುಂದೂಡಲು ಬಿಡಬ್ಲ್ಯೂಎಫ್ ಮೇಲೆ ಒತ್ತಡ ಬಂದಿದೆ. ಅದರಿಂದಾಗಿ ಶ್ರೀಕಾಂತ್ ಮತ್ತು ಸೈನಾ ಸೇರಿದಂತೆ ಆಟಗಾರರಿಗೆ ಅರ್ಹತೆಯನ್ನು ಗಳಿಸಲು ಅವಕಾಶವಿರುವುದಿಲ್ಲ.

"ಆದಾಗ್ಯೂ, ನಾವು ಇನ್ನೂ ರಾಷ್ಟ್ರೀಯ ಒಲಿಂಪಿಕ್ ಸಮಿತಿಮತ್ತು ಸದಸ್ಯ ಸಂಘಗಳಿಂದ ದೃಢೀಕರಣ ಗಳನ್ನು ಸ್ವೀಕರಿಸಬೇಕಾಗಿದೆ, ಅದರ ನಂತರ ಯಾವುದೇ ಮರುಹಂಚಿಕೆಗಳು ಸಾಧ್ಯವಾಗಲಿದೆ. ಇದು ಪೂರ್ಣಗೊಳ್ಳಲು ಹಲವಾರು ವಾರಗಳು ಬೇಕು." ಬಿಡಬ್ಲ್ಯೂಎಫ್ ಪ್ರಧಾನ ಕಾರ್ಯದರ್ಶಿ ಥಾಮಸ್ ಲಂಡ್ ಹೇಳಿದ್ದಾರೆ

ಅರ್ಹತಾ ನಿಯಮಗಳ ಪ್ರಕಾರ, ಅಗ್ರ 16 ಆಟಗಾರರು - ಒಂದು ದೇಶದಿಂದ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಗರಿಷ್ಠ ಇಬ್ಬರು ಆಟಗಾರರು ಅವಕಾಶ ಪಡೆಯಲಿದ್ದಾರೆ. "ಈ ಪ್ರಕ್ರಿಯೆಯ ಕೊನೆಯಲ್ಲಿ ಪ್ರಕಟಿಸಬೇಕಾದ ಅಂತಿಮ ಭಾಗವಹಿಸುವಿಕೆ ಪಟ್ಟಿಗಳು ಮತ್ತು ಸೀಡ್ ಗಳೊಂದಿಗೆ ಶೀಘ್ರದಲ್ಲೇ ಆಮಂತ್ರಣಗಳನ್ನು ಕಳುಹಿಸಲಾಗುವುದು" ಎಂದು ಬಿಡಬ್ಲ್ಯೂಎಫ್ ಹೇಳಿದೆ.

ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹರಾಗಿರುವ ಭಾರತೀಯ ಶಟ್‌ಲರ್‌ಗಳಲ್ಲಿ ಪಿ.ವಿ ಸಿಂಧು, ಬಿ ಸಾಯಿ ಪ್ರಣೀತ್, ಮತ್ತು ಪುರುಷರ ಡಬಲ್ಸ್ ಜೋಡಿಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ರಾಜ್ ರಾಂಕಿ ರೆಡ್ಡಿ ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com