ಟೋಕಿಯೊ ಒಲಂಪಿಕ್ಸ್: ಗಾಲ್ಫ್‌ನ 3ನೇ ಸುತ್ತಿನಲ್ಲೂ 2ನೇ ಸ್ಥಾನದಲ್ಲಿದ್ದು ಪದಕ ಆಸೆ ಜೀವಂತವಿರಿಸಿದ ಭಾರತದ ಅದಿತಿ ಅಶೋಕ
ಟೋಕಿಯೊ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯ ಮೂರನೇ ಸುತ್ತಿನ ನಂತರ ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಅಗ್ರ ಅಮೇರಿಕನ್ ನೆಲ್ಲಿ ಕೊರ್ಡಾಕ್ಕಿಂತ ಕೇವಲ ಮೂರು ಹೊಡೆತಗಳ ಹಿಂದೆ ಇದ್ದಾರೆ.
Published: 06th August 2021 08:09 PM | Last Updated: 06th August 2021 08:09 PM | A+A A-

ಅದಿತಿ ಅಶೋಕ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ಸ್ಪರ್ಧೆಯ ಮೂರನೇ ಸುತ್ತಿನ ನಂತರ ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಅಗ್ರ ಅಮೇರಿಕನ್ ನೆಲ್ಲಿ ಕೊರ್ಡಾಕ್ಕಿಂತ ಕೇವಲ ಮೂರು ಹೊಡೆತಗಳ ಹಿಂದೆ ಇದ್ದಾರೆ.
ಅದಿತಿ ಪದಕದ ಭರವಸೆಯಾಗಿ ಉಳಿದಿದ್ದಾರೆ ಅದಿತಿ ಮೂರನೇ ಸುತ್ತಿನಲ್ಲಿ ಮೂರು-ಅಂಡರ್ 68 ಕಾರ್ಡ್ ಆಡಿದರು. ಮತ್ತು ಅವರ ಮೂರು ಸುತ್ತಿನ ಒಟ್ಟು ಸ್ಕೋರ್ 12-ಅಂಡರ್ 201 ಕ್ಕೆ ಏರಿದೆ. ಅಮೇರಿಕನ್ ಗಾಲ್ಫ್ ಆಟಗಾರ ಕೊರ್ಡಾ(69) ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಅದಿತಿ ಮೂರನೇ ಸುತ್ತಿನಲ್ಲಿ ಐದು ಬರ್ಡಿಗಳು ಮತ್ತು ಎರಡು ಬೋಗಿಗಳನ್ನು ಆಡಿದರು. ಮೊದಲ ಎರಡು ಸುತ್ತುಗಳಲ್ಲಿ ಅದಿತಿ 67 ಮತ್ತು 66 ರ ಕಾರ್ಡುಗಳನ್ನು ಆಡಿದ್ದರು. ಆಕೆ ಇನ್ನೂ ಒಂದು ಸುತ್ತಿನಲ್ಲಿ ತನ್ನ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಅವರು ಹೊಸ ಇತಿಹಾಸವನ್ನು ಸೃಷ್ಟಿಸಬಹುದು. ಜಂಟಿ ಮೂರನೇ ಸ್ಥಾನದಲ್ಲಿರುವ ನಾಲ್ಕು ಆಟಗಾರರಿಗಿಂತ ಅದಿತಿ ಎರಡು ಹೊಡೆತಗಳ ಮುಂದಿದ್ದಾರೆ.
ಮಹಿಳಾ ಗಾಲ್ಫ್‌ನಲ್ಲಿ, ಇನ್ನೊಬ್ಬ ಭಾರತೀಯ ಗಾಲ್ಫ್ ಆಟಗಾರ ದೀಕ್ಷಾ ದಾಗರ್ (72) ಮೂರು ಸುತ್ತುಗಳ ನಂತರ ಜಂಟಿ 51ನೇ ಸ್ಥಾನದಲ್ಲಿದ್ದಾರೆ.