
ಬಜರಂಗ್ ಪೂನಿಯಾ
ಟೋಕಿಯೊ: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಸೆಮಿಫೈನಲ್ ನಲ್ಲಿ ಅಜರ್ಬೈಜಾನ್ ಕುಸ್ತಿಪಟು ವಿರುದ್ಧ ಸೋಲು ಕಂಡಿದ್ದಾರೆ.
65 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಬಜರಂಗ್ ಪೂನಿಯಾ ಅಜರ್ಬೈಜಾನ್ ಕುಸ್ತಿಪಟು ಹಾಜಿ ಅಲಿಯೇವ್ ವಿರುದ್ಧ 5-12 ಅಂಕಗಳಿಂದ ಸೋಲು ಕಂಡಿದ್ದಾರೆ.
ಇನ್ನು ಕ್ರೀಡಾಕೂಟದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕಕ್ಕಾಗಿ ರಷ್ಯಾದ ಗಾಡ್ಜಿಮುರಾದ್ ರಶಿದೋವ್ ವಿರುದ್ಧ ಸೆಣೆಸಲಿದ್ದಾರೆ.