'ಚಿನ್ನದ ಹುಡುಗ' ನೀರಜ್ ಚೋಪ್ರಾ ಮುಂದಿನ ಗುರಿ 90 ಮೀ.ಜಾವೆಲಿನ್ ಎಸೆತ 

ಕಂಡ ಕನಸು, ಇಟ್ಟುಕೊಂಡ ಗುರಿಯಂತೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ ಭಾರತದ 23 ವರ್ಷದ ಹರ್ಯಾಣದ ಪಾಣಿಪತ್ ನ ನೀರಜ್ ಚೋಪ್ರಾ. ಇನ್ನು ಮುಂದಿನ ಅವರ ಗುರಿ 90 ಮೀಟರ್ ದೂರಕ್ಕೆ ಎಸೆಯುವುದು.
ನೀರಜ್ ಚೋಪ್ರಾ
ನೀರಜ್ ಚೋಪ್ರಾ

ಟೋಕಿಯೊ: ಕಂಡ ಕನಸು, ಇಟ್ಟುಕೊಂಡ ಗುರಿಯಂತೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ ಭಾರತದ 23 ವರ್ಷದ ಹರ್ಯಾಣದ ಪಾಣಿಪತ್ ನ ನೀರಜ್ ಚೋಪ್ರಾ. ಇನ್ನು ಮುಂದಿನ ಅವರ ಗುರಿ 90 ಮೀಟರ್ ದೂರಕ್ಕೆ ಎಸೆಯುವುದು.

ಅಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ಎರಡನೇ ಆಟಗಾರ ನೀರಜ್ ಚೋಪ್ರಾ. ಒಲಿಂಪಿಕ್  ಗೇಮ್ ನ ದಾಖಲೆ ಜಾವೆಲಿನ್ ಥ್ರೋನಲ್ಲಿ 90.57 ಮೀಟರ್ ವರೆಗೆ ಎಸೆದು ದಾಖಲೆ ನಿರ್ಮಿಸುವ ಗುರಿ ಹೊಂದಿದ್ದರಾದರೂ ಅದು ಸಾಧ್ಯವಾಗಲಿಲ್ಲ. 

ಜಾವೆಲಿನ್ ಥ್ರೋ ಒಂದು ತಾಂತ್ರಿಕ ಪಂದ್ಯವಾಗಿದ್ದು ಆಟಗಾರನ ಫಾರ್ಮ್ ನ್ನು ಅವಲಂಬಿಸಿಕೊಂಡಿರುತ್ತದೆ. ಏನು ಬೇಕಾದರೂ ನಡೆಯಬಹುದು. ಹೀಗಾಗಿ ನನ್ನ ಮುಂದಿನ ಗುರಿ 90 ಮೀಟರ್ ವರೆಗೆ ಎಸೆಯುವುದು. ಈ ವರ್ಷ ಒಲಿಂಪಿಕ್ ಮೇಲೆ ಮಾತ್ರ ಗಮನ ಹರಿಸಿದ್ದೆ. ಚಿನ್ನದ ಪದಕ ಗೆದ್ದೆ. ಮುಂದಿನ ಸ್ಪರ್ಧೆಗಳ ಮೇಲೆ ಇನ್ನು ಗಮನ ಹರಿಸುತ್ತೇನೆ. ಭಾರತಕ್ಕೆ ಹಿಂತಿರುಗಿದ ಮೇಲೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ವಿದೇಶಿ ವಿಸಾ ಪಡೆಯುತ್ತೇನೆ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಜುಲೈ 13 ರಂದು ಗೇಟ್ಸ್‌ಹೆಡ್ ಡೈಮಂಡ್ ಲೀಗ್‌ನಿಂದ ಹೊರಬಂದ ನಂತರ, ಒಲಿಂಪಿಕ್ಸ್ ನಂತರ ಗಣ್ಯರ ಏಕದಿನ ಸರಣಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸಬಹುದು. ಇದೇ 26ರಂದು ಲೌಸನ್ನೆ ಮತ್ತು ಪ್ಯಾರಿಸ್ ನಲ್ಲಿ ಆಗಸ್ಟ್ 28ರಂದು ಹಾಗೂ ಜ್ಯೂರಿಚ್ ಫೈನಲ್ಸ್ ಸೆಪ್ಟೆಂಬರ್ 9ರಂದು ಪುರುಷರ ಜಾವೆಲಿನ್ ಸ್ಪರ್ಧೆಗಳನ್ನು ಹೊಂದಿರುತ್ತದೆ.

ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದ 23 ವರ್ಷದ ರೈತನ ಮಗ ನೀರಜ್ ನಿನ್ನೆಯ ಒಲಿಂಪಿಕ್ ಗೇಮ್ ನಲ್ಲಿ ಎರಡನೇ ಸುತ್ತಿನಲ್ಲಿ 87.58 ಮೀಟರ್ ವರೆಗೆ ಎಸೆದು ಭಾರತದ 100 ವರ್ಷಗಳ ಟ್ರ್ಯಾಕ್ ಅಂಡ್ ಫೀಲ್ಡ್ ಪ್ರಶಸ್ತಿ ಗಿಟ್ಟಿಸಿಕೊಂಡರು.

ನಿನ್ನೆ ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚೋಪ್ರಾ, ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ ಒಲಿಂಪಿಕ್ ನ್ನು ಕೂಡ ಇನ್ನೊಂದು ಪಂದ್ಯದಂತೆ ಪರಿಗಣಿಸಿದೆ. ಬೇರೆ ಆಟಗಾರರ ಬಗ್ಗೆ ಯೋಚಿಸಲಿಲ್ಲ, ನನ್ನ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಗೆಲ್ಲಲು ಸಹಾಯ ಮಾಡಿತು. ಜಾವೆಲಿನ್ ಕೋಲನ್ನು ಕೈಯಲ್ಲಿ ಹಿಡಿದಾಗ ನನಗೆ ಆ ಆಟದ ಬಗ್ಗೆ ಮಾತ್ರ ಗಮನವಿರುತ್ತಿತ್ತು ಎಂದು ಹೇಳಿದ್ದಾರೆ.

ನಾನು ಒಲಿಂಪಿಕ್ಸ್‌ಗೆ ಮುನ್ನ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (TOPS), ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಕೆಲವು ವ್ಯವಸ್ಥೆಗಳನ್ನು ಮಾಡಿಕೊಡುವಂತೆ ನಾನು ಕೇಳಿಕೊಂಡಿದ್ದೆ. ಅವರು ವ್ಯವಸ್ಥೆ ಮಾಡಿದರು, ಎಲ್ಲರ ಸಹಕಾರದಿಂದಾಗಿ ನಾನು ಈ ಮಟ್ಟದವರೆಗೆ ಬಂದೆ. ನನಗೆ ಸಹಕಾರ, ಸೌಲಭ್ಯ ಒದಗಿಸಿದ SAI, AFI ಮತ್ತು TOPS ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com