ಕಾಂಕ್ರೀಟ್ ರಸ್ತೆ ಆಯ್ತು, ಕಂಚಿನ ಪದಕ ವಿಜೇತೆ ಲವ್ಲಿನಾ ಗ್ರಾಮಕ್ಕೆ ಬರಲಿದೆ ಕೊಳವೆ ನೀರು, ಕ್ರೀಡಾ ಅಕಾಡೆಮಿ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಕಂಚಿನ ಪದಕ ಸಾಧನೆ ಅಲ್ಪಕಾಲಿಕವಾಗಿರುವುದಿಲ್ಲ. ಆಕೆಯ ಹಳ್ಳಿಗರು ಕುಡಿಯುವ ಪ್ರತಿ ಹನಿ ನೀರು ಈ ಸಾಧನೆಯನ್ನು ನೆನಪಿಸುತ್ತದೆ.
ಲವ್ಲಿನಾ
ಲವ್ಲಿನಾ

ಗುವಾಹಟಿ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಕಂಚಿನ ಪದಕ ಸಾಧನೆ ಅಲ್ಪಕಾಲಿಕವಾಗಿರುವುದಿಲ್ಲ. ಆಕೆಯ ಹಳ್ಳಿಗರು ಕುಡಿಯುವ ಪ್ರತಿ ಹನಿ ನೀರು ಈ ಸಾಧನೆಯನ್ನು ನೆನಪಿಸುತ್ತದೆ.

ಓಡಾಡಲು ರಸ್ತೆ ನಿರ್ಮಿಸಿದ ನಂತರ ರಾಜ್ಯ ಸರ್ಕಾರವು ಈಗ ಗೋಲಘಾಟ್ ಜಿಲ್ಲೆಯ ಸರುಪಥರ್ ವಿಧಾನಸಭಾ ಕ್ಷೇತ್ರದ ಪುಗಿಲಿಸ್ಟ್‌ನ ಬಾರೋ ಮುಖಿಯಾ ಹಳ್ಳಿಯ ಪ್ರತಿ ಮನೆಗೂ ಕೊಳವೆ ನೀರನ್ನು ಒದಗಿಸುತ್ತಿದೆ.

ಅಷ್ಟೇ ಅಲ್ಲ, ಬಿಜೆಪಿಯ ಸ್ಥಳೀಯ ಶಾಸಕ ಬಿಸ್ವಜಿತ್ ಫುಕಾನ್ ಈಗಾಗಲೇ ತನ್ನ ಮನೆಯಿಂದ 2 ಕಿಮೀ ದೂರದ ನಹರ್ಬರಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಫುಕಾನ್, ಎರಡು ಯೋಜನೆಗಳನ್ನು ಈ ವರ್ಷದೊಳಗೆ ಪ್ರಾರಂಭಿಸಲಾಗುವುದು ಎಂದರು. 

ಅಕಾಡೆಮಿಯನ್ನು 5.35 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗುವುದು. ಯೋಜನೆಗಳ ಪ್ರಕಾರ, ಇದು ಆಟದ ಮೈದಾನ, ಆಡಿಟೋರಿಯಂ, ಬಾಕ್ಸಿಂಗ್ ರಿಂಗ್, ಬಿಲ್ಲುಗಾರಿಕೆಗೆ ಅರೆನಾ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ ಎಂದು ಶಾಸಕರು ಹೇಳಿದರು.

ನಾನು ಈಗಾಗಲೇ ಕ್ರೀಡಾ ಅಕಾಡೆಮಿಯ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಬಳಿ ಕೇಳಿಕೊಂಡಿದ್ದೇನೆ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಫುಕಾನ್ ಹೇಳಿದರು. ಇನ್ನು ಅಕಾಡೆಮಿಯನ್ನು ಅಂದಾಜು 15 ಕೋಟಿ ರೂಪಾಯಿ ಸರ್ಕಾರಿ ಹಣ ಅಥವಾ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾಗುವುದು ಎಂದರು. 

ಲವ್ಲಿನಾ ಹಳ್ಳಿಯಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ನೀರು ಸರಬರಾಜು ಯೋಜನೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಳ್ಳಿಯ ಪ್ರತಿಯೊಂದು ಮನೆಗೂ ಕೊಳವೆ ನೀರು ಸಿಗಲಿದೆ ಎಂದು ಶಾಸಕರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com