ಟೋಕಿಯೊ ಒಲಂಪಿಕ್ಸ್‌ನಲ್ಲಿ ಅನುಚಿತ ವರ್ತನೆ: ಕುಸ್ತಿಪಟು ವಿನೇಶ್ ಪೋಗಟ್ ಅಮಾನತು

ಟೋಕಿಯೊ ಒಲಂಪಿಕ್ಸ್‌ನಲ್ಲಿ ಅಶಿಸ್ತು, ಅನುಚಿತವಾಗಿ ವರ್ತಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ರನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲುಎಫ್ಐ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ವಿನೇಶ್ ಪೋಗಟ್
ವಿನೇಶ್ ಪೋಗಟ್

ನವದೆಹಲಿ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಅಶಿಸ್ತು, ಅನುಚಿತವಾಗಿ ವರ್ತಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ರನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲುಎಫ್ಐ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. 

ವಿನೇಶ್ ಪೋಗಟ್ ಭಾರತದಿಂದ ತೆರಳಿದ್ದ ಸಹ ಕುಸ್ತಿಪಟುಗಳ ಜೊತೆ ಗಲಾಟೆ ಆರೋಪ, ಅಲ್ಲದೆ ತಮ್ಮ ಪ್ರಾಯೋಜಕತ್ವವನ್ನು ಕೈಬಿಟ್ಟು ಇತರೆ ಕಂಪನಿಗಳ ಬಟ್ಟೆ ಧರಿಸಿ ಕಣಕ್ಕಿಳಿದ್ದಿದ್ದರೂ ಈ ಹಿನ್ನೆಲೆಯಲ್ಲಿ ಆಕೆಯನ್ನು ಭಾರತೀಯ ಕುಸ್ತಿ ಫೆಡರೇಶನ್ ಕ್ರಮಕೈಗೊಂಡಿದೆ. ಇದೇ ವೇಳೆ ಮಹಿಳಾ ಕುಸ್ತಿಪಟು ಸೋಮನ್ ಮಲಿಕ್ ಗೆ ಡಬ್ಲುಎಫ್ಐ ನೋಟಿಸ್ ನೀಡಿದೆ. 

ವಿಶ್ವದ ನಂಬರ್ 1 ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ರಿಂದ ಟೋಕಿಯೊ ಒಲಂಪಿಕ್ಸ್ ನಲ್ಲಿ ಪದಕ ನಿರೀಕ್ಷಿಸಲಾಗಿತ್ತು. ಆದರೆ ಒಲಂಪಿಕ್ಸ್ ನಲ್ಲಿ ನಿರಸ ಪ್ರದರ್ಶನ ನೀಡಿದ್ದರು. 53 ಕೆಜಿ ತೂಕ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಬೆಲಾರಸ್ ನ ವನೆಸ್ಸಾ ಕಲಾಡ್ಜಿನ್ಸ್ಕಯಾ ವಿರುದ್ಧ ಸೋಲು ಕಂಡಿದ್ದರು. 

ವಿನೇಶ್ ಪೋಗಟ್ ಗೆ ನೋಟೀಸ್ ನೀಡಿರುವ ಡಬ್ಲ್ಯೂಎಫ್ಐ ಆಗಸ್ಟ್ 16ರೊಳಗೆ ಉತ್ತರಿಸುವಂತೆ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com