ವಿಶ್ವ ಚಾಂಪಿಯನ್‌ಶಿಪ್ ಮೇಲೆ ನೀರಜ್ ಚೋಪ್ರಾ ಕಣ್ಣು

ಈಗಷ್ಟೇ ಮುಕ್ತಾಯಗೊಂಡ ಟೋಕಿಯೊ ಒಲಂಪಿಕ್ಸ್ ನಲ್ಲಿ ದೇಶದ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕ ಗೆದ್ದ ಸ್ಟಾರ್ ಇಂಡಿಯನ್ ಜಾವೆಲಿನ್ ಥ್ರೋಯರ್ ನೀರಜ್ ಚೋಪ್ರಾ ತನ್ನ ಚಿನ್ನದಿಂದ ತೃಪ್ತಿ ಹೊಂದಿಲ್ಲ.
ನೀರಜ್ ಚೋಪ್ರಾ
ನೀರಜ್ ಚೋಪ್ರಾ

ನವದೆಹಲಿ: ಈಗಷ್ಟೇ ಮುಕ್ತಾಯಗೊಂಡ ಟೋಕಿಯೊ ಒಲಂಪಿಕ್ಸ್ ನಲ್ಲಿ ದೇಶದ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕ ಗೆದ್ದ ಸ್ಟಾರ್ ಇಂಡಿಯನ್ ಜಾವೆಲಿನ್ ಥ್ರೋಯರ್ ನೀರಜ್ ಚೋಪ್ರಾ ತನ್ನ ಚಿನ್ನದಿಂದ ತೃಪ್ತಿ ಹೊಂದಿಲ್ಲ ಮತ್ತು ಈಗ ಅಮೆರಿಕದ ಒರೆಗಾನ್ ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ.

2022 ಜುಲೈ 15 ರಿಂದ 24ರ ವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಡೆಲಿದೆ.

ನಾನು ಈ ಮೊದಲು ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್, ಈಗ ಒಲಿಂಪಿಕ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ. ಹಾಗಾಗಿ ಈಗ ನನ್ನ ಮುಂದಿನ ಗುರಿ ಮುಂದಿನ ವರ್ಷದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಎಂದು ಅಥ್ಲೆಟಿಕ್ಸ್ ಫೆಡರೇಶನ್(ಎಎಫ್ ಐ) ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೀರಜ್ ಚೋಪ್ರಾ ಹೇಳಿದ್ದಾರೆ.

ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲಲು ವಿಶ್ವ ಚಾಂಪಿಯನ್ ಗಳ ವಿರುದ್ಧ ನಾನು ಹೋರಾಡಬೇಕಾಗುತ್ತದೆ. ಇದು ಒಂದು ದೊಡ್ಡ ಸ್ಪರ್ಧೆ ಮತ್ತು ಕೆಲವೊಮ್ಮೆ ಒಲಂಪಿಕ್ ಕ್ರೀಡೆಗಳಿಗಿಂತ ಕಠಿಣವಾಗಿರುತ್ತದೆ. ಈ ಒಲಂಪಿಕ್ ಚಿನ್ನದಿಂದ ನಾನು ಎಂದಿಗೂ ತೃಪ್ತನಾಗುವುದಿಲ್ಲ. ನಾನು ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ ಗೇಮ್ಸ್ ನಲ್ಲಿ ಮತ್ತೊಮ್ಮೆ ಗೆಲ್ಲಲು ಬಯಸುತ್ತೇನೆ ಎಂದಿದ್ದಾರೆ.

ಒಲಂಪಿಕ್ಸ್ ಕೂಟದಲ್ಲಿ ಜಯಿಸಿದ ಬಂಗಾರದ ಪದಕದ ಗುಂಗಿನಿಂದ ಹೊರಬಂದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಬಂಗಾರದ ಪದಕ ಪಡೆಯಲು ನಾನು ಶಕ್ತಿಮಿರಿ ಯತ್ನಿಸುವೆ ಎಂದು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com