ಭಾರತದ ಮಹಿಳಾ ಫುಟ್ ಬಾಲ್ ತಂಡಕ್ಕೆ ಥಾಮಸ್ ಡೆನ್ನರ್ ಬಿ ಮುಖ್ಯ ತರಬೇತುದಾರ

ಭಾರತದ ಮಹಿಳಾ ಫುಟ್ಬಾಲ್ ತಂಡದ  ಮುಖ್ಯ ತರಬೇತುದಾರರಾಗಿ ಸ್ವೀಡನ್ ನ ಥಾಮಸ್ ಡೆನ್ನರ್ ಬಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ (ಎಐಎಫ್ ಎಫ್) ಶುಕ್ರವಾರ ಪ್ರಕಟಿಸಿದೆ.
ಥಾಮಸ್ ಡೆನ್ನರ್ ಬಿ
ಥಾಮಸ್ ಡೆನ್ನರ್ ಬಿ

ನವದೆಹಲಿ: ಭಾರತದ ಮಹಿಳಾ ಫುಟ್ಬಾಲ್ ತಂಡದ  ಮುಖ್ಯ ತರಬೇತುದಾರರಾಗಿ ಸ್ವೀಡನ್ ನ ಥಾಮಸ್ ಡೆನ್ನರ್ ಬಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ (ಎಐಎಫ್ ಎಫ್) ಶುಕ್ರವಾರ ಪ್ರಕಟಿಸಿದೆ.

62 ವರ್ಷದ ಡೆನ್ನರ್ ಬಿ ಈ ಹಿಂದೆ ಭಾರತದ 17 ವರ್ಷದೊಳಗಿನ ಮಹಿಳೆಯರ ವಿಶ್ವ ಕಪ್ ತಂಡದ ತರಬೇತುದಾರರಾಗಿದ್ದರು. ಮುಂದಿನ ವರ್ಷ ನಡೆಯಲಿರುವ ಎಎಫ್ ಸಿ ಏಷ್ಯಾ ಕಪ್ ಟೂರ್ನಿಗೆ ಸಜ್ಜುಗೊಳ್ಳಲು ಮಹಿಳಾ ತಂಡಕ್ಕೆ ಅವರು ನೆರವಾಗುತ್ತಿದ್ದಾರೆ. ಮಹಿಳಾ ತಂಡದ ತರಬೇತುದಾರ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಅಖಿಲ ಭಾರತ ಫುಟ್ ಬಾಲ್  ಫೆಡರೇಷನ್ ಗೆ ಕೃತಜ್ಞನಾಗಿರುತ್ತೇನೆ. ಇದು ನನಗೆ ದೊರತೆ ಗೌರವಾಗಿದೆ ಎಂದು ಡೆನ್ನರ್ ಬಿ ಹೇಳಿರುವುದಾಗಿ ಎಐಎಫ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಎಎಫ್ ಸಿ ಮಹಿಳಾ ಏಷ್ಯಾ ಕಪ್ ಗೆ ಮಹಿಳಾ ತಂಡವನ್ನು ತಯಾರಿ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ. ಜೀವನವೇ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.  ಡೆನ್ನರ್ ಬಿ ಮೂವತ್ತು ವರ್ಷಗಳ ಅನುಭವ ಹೊಂದಿದ್ದು, ಹಲವು ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದಾರೆ. ಇವರು ಮಹಿಳಾ ತಂಡಕ್ಕೆ ಹೊಸ ಚೈತನ್ಯ ತುಂಬಲಿದ್ದಾರೆ ಎಂದು ಎಐಎಫ್ ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com