ಕರಾಟೆ ಸೇರಿ ನಾಲ್ಕು ಕ್ರೀಡೆಗಳು ಟೋಕಿಯೊ ಒಲಿಂಪಿಕ್ಸ್‌ಗೆ ಹೊಸದಾಗಿ ಸೇರ್ಪಡೆ

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಸದಾಗಿ ನಾಲ್ಕು ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಇನ್ನು 339 ಪದಕ ಸ್ಪರ್ಧೆಗಳೊಂದಿಗೆ, ಟೋಕಿಯೊ ಒಲಿಂಪಿಕ್ಸ್ ದೊಡ್ಡ ಕ್ರೀಡಾಕೂಟವಾಗಿದೆ.
ಟೋಕಿಯೋ ಒಲಂಪಿಕ್ಸ್ ಗೆ ಕರೋನಾ ವೈರಸ್ ಭೀತಿ!
ಟೋಕಿಯೋ ಒಲಂಪಿಕ್ಸ್ ಗೆ ಕರೋನಾ ವೈರಸ್ ಭೀತಿ!

ಟೋಕಿಯೊ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಸದಾಗಿ ನಾಲ್ಕು ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಇನ್ನು 339 ಪದಕ ಸ್ಪರ್ಧೆಗಳೊಂದಿಗೆ, ಟೋಕಿಯೊ ಒಲಿಂಪಿಕ್ಸ್ ದೊಡ್ಡ ಕ್ರೀಡಾಕೂಟವಾಗಿದೆ.

ಕೊರೋನಾ ಆತಂಕಕ್ಕೆ ಗುರಿಯಾಗಿರುವ ಟೋಕಿಯೊ ಕ್ರೀಡಾಕೂಟದಲ್ಲಿ ಐದು ಕ್ರೀಡೆಗಳನ್ನು ಒಲಿಂಪಿಕ್ ಕಾರ್ಯಕ್ರಮಕ್ಕೆ ಸೇರ್ಪಡೆಗೊಳಿಸಿದೆ. ಅದರಲ್ಲಿ ನಾಲ್ಕು ಕ್ರೀಡೆಗಳು ಮೊದಲ ಬಾರಿಗೆ ಸೇರ್ಪಡೆಗೊಳಿಸಲಾಗಿದ್ದರೆ ಬೇಸ್ ಬಾಲ್/ಸಾಫ್ಟ್ ಬಾಲ್ ಮರು ಸೇರ್ಪಡೆಗೊಂಡಿದೆ. ಕ್ರೀಡಾಕೂಟವು ಜುಲೈ 23ರಂದು ಪ್ರಾರಂಭವಾಗಲು ಐದು ದಿನಗಳು ಬಾಕಿ ಇರುವಾಗ ಕೊರೋನಾ ದಾಂಗುಟಿ ಇಟ್ಟಿದೆ. ಕೆಲ ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದೆ. 

ನಾಲ್ಕು ಚೊಚ್ಚಲ ಕ್ರೀಡೆ ಸೇರಿದಂತೆ ಐದು ಹೊಸ ಕ್ರೀಡೆಗಳ ಒಂದು ನೋಟ ಇಲ್ಲಿದೆ:

1. ಸ್ಕೇಟ್‌ಬೋರ್ಡಿಂಗ್: ಸ್ಕೇಟ್‌ಬೋರ್ಡಿಂಗ್ ಒಂದು ಕ್ರಿಯಾಶೀಲ ಕ್ರೀಡೆಯಾಗಿದ್ದು, ಇದು ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ನಂತರ ಟೋಕಿಯೊದಲ್ಲಿ ಪಾದಾರ್ಪಣೆ ಮಾಡಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಭಾಗವಾಗಲು ಈಗಾಗಲೇ ಅನುಮೋದನೆ ಪಡೆದಿದ್ದರಿಂದ ಈ ಕ್ರೀಡೆಯು ಭಾರಿ ಉತ್ತೇಜನವನ್ನು ಪಡೆಯಿತು. ನೈಜಾ ಹಸ್ಟನ್(ಯುಎಸ್ಎ), ಪೆಡ್ರೊ ಬ್ಯಾರೊಸ್(ಬ್ರೆಜಿಲ್), ಶೇನ್ ಒ'ನೀಲ್(ಆಸ್ಟ್ರೇಲಿಯಾ), ಲೆಟಿಸಿಯಾ ಬುಫೊನಿ(ಬ್ರೆಜಿಲ್), ಅಲೆಕ್ಸ್ ಸೊರ್ಗೆಂಟೆ(ಇಟಲಿ), ಜಪಾನ್‌ನ ಯುಟೊ ಹರಿಗೊಮ್ ಮತ್ತು ಆರಿ ನಿಶಿಮುರಾ ಮತ್ತು 12 ವರ್ಷದ ಬ್ರಿಟಿಷ್ ಸ್ಕೈ ಬ್ರೌನ್ ಟೋಕಿಯೊದಲ್ಲಿ ಕ್ರೀಡೆಯಲ್ಲಿ ಉನ್ನತ ಗೌರವಗಳಿಗಾಗಿ ಸ್ಪರ್ಧಿಸುವ ದೊಡ್ಡ ಹೆಸರುಗಳು.

2. ಸರ್ಫಿಂಗ್: ಸರ್ಫಿಂಗ್ ಮತ್ತೊಂದು ಆಕ್ಷನ್-ಪ್ಯಾಕ್ಡ್ ಸಾಹಸ ಕ್ರೀಡೆಯಾಗಿದ್ದು ಅದು ಒಲಿಂಪಿಕ್‌ಗೆ ಪಾದಾರ್ಪಣೆ ಮಾಡುತ್ತದೆ. ಮತ್ತು ಇದು ಮೆಗಾ ಕ್ರೀಡಾಕೂಟದ ಒಂದು ಭಾಗವಾಗಿ ಮುಂದುವರಿಯುತ್ತದೆ ಏಕೆಂದರೆ ಇದು 2024ರ ಪ್ಯಾರಿಸ್ ಕ್ರೀಡಾಕೂಟಕ್ಕೂ ಅನುಮೋದನೆ ಪಡೆದಿದೆ. ಸ್ಪರ್ಧೆಯು ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆಯಲಿದೆ. ಮುಂಬರುವ ಕ್ರೀಡಾಕೂಟದಲ್ಲಿ ಗಮನಹರಿಸಬೇಕಾದ ಅಗ್ರ ಐದು ಸರ್ಫರ್‌ಗಳು ಬ್ರೆಜಿಲ್‌ನ ಗೇಬ್ರಿಯಲ್ ಮದೀನಾ, ಯುಎಸ್ಎದ ಮಾಜಿ ವಿಶ್ವ ಚಾಂಪಿಯನ್ ಜಾನ್ ಜಾನ್ ಫ್ಲಾರೆನ್ಸ್, ಇನ್ನೊಬ್ಬರು ಅಮೆರಿಕದ ಕ್ಯಾರಿಸ್ಸಾ ಮೂರ್, ಆಸ್ಟ್ರೇಲಿಯಾದ ಏಳು ಬಾರಿ ವಿಶ್ವ ಚಾಂಪಿಯನ್ ಸ್ಟೆಫನಿ ಗಿಲ್ಮೋರ್ ಮತ್ತು ಸ್ಥಳೀಯ ನೆಚ್ಚಿನ ಕನೋವಾ ಇಗರಾಶಿ.

3. ಸ್ಪೋರ್ಟ್ ಕ್ಲೈಂಬಿಂಗ್: ಕ್ರೀಡಾ ಕ್ಲೈಂಬಿಂಗ್ 1980ರ ದಶಕದಲ್ಲಿ ಮಾನ್ಯತೆ ಪಡೆಯಲು ಪ್ರಾರಂಭಿಸಿತು. ಟೋಕಿಯೊದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ. ಟೋಕಿಯೊದ ಅಯೋಮಿ ಅರ್ಬನ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಕ್ರೀಡೆ ಒಂದೇ ಸ್ಪರ್ಧೆಯಾಗಿ ಸ್ಪರ್ಧಿಸಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಗ್ರಗಣ್ಯ ಕ್ರೀಡಾ ಆರೋಹಿಗಳು ಜೆಕ್ ಗಣರಾಜ್ಯದ ಆಡಮ್ ಒಂಡ್ರಾ, ಸ್ಲೊವೇನಿಯಾದ ಜಂಜಾ ಗಾರ್ನ್‌ಬ್ರೆಟ್, ಜಪಾನ್‌ನ ಮಿಹೋ ನೊನಾಕಾ, ಮಾವೆಮ್ ಬ್ರದರ್ಸ್-ಫ್ರಾನ್ಸ್‌ನ ಮೈಕೆಲ್ ಮತ್ತು ಬಾಸ್ಸಾ ಮತ್ತು ಬ್ರಿಟನ್‌ನ ಶೌನಾ ಕಾಕ್ಸ್ಸೆ.

4. ಕರಾಟೆ: ಜಪಾನ್‌ನ ಸಾಂಪ್ರದಾಯಿಕ ಸಮರ ಕಲೆಗಳಾದ ಕರಾಟೆ ಟೋಕಿಯೊದಲ್ಲಿ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಲಿದೆ. 1868ರಲ್ಲಿ ಜಪಾನ್‌ನ ಓಕಿನಾವಾದಲ್ಲಿ ಜನಿಸಿದ ಈ ಕ್ರೀಡೆಯನ್ನು ದೇಶದಲ್ಲಿ ಶ್ರೀಮಂತ ಇತಿಹಾಸ ಮತ್ತು ಜನಪ್ರಿಯತೆಯಿಂದಾಗಿ ಸಂಘಟನಾ ಸಮಿತಿಯು ರೋಸ್ಟರ್‌ನಲ್ಲಿ ಸೇರಿಸಿಕೊಂಡಿತು. ಆದಾಗ್ಯೂ, ಪ್ಯಾರಿಸ್ನಲ್ಲಿ ನಡೆಯಲಿರುವ ಕ್ರೀಡಾಕೂಟದ ಮುಂದಿನ ಆವೃತ್ತಿಯಲ್ಲಿ ಕರಾಟೆ ಕಾಣಿಸುವುದಿಲ್ಲ. ಬೇಸಿಗೆ ಒಲಿಂಪಿಕ್ಸ್‌ನ 32ನೇ ಆವೃತ್ತಿಯಲ್ಲಿ, ಕರಾಟೆ ಎರಡು ವಿಭಾಗಗಳಲ್ಲಿ ನಡೆಯಲಿದೆ.

5. ಬೇಸ್‌ಬಾಲ್/ಸಾಫ್ಟ್‌ಬಾಲ್: 1992ರ ಬಾರ್ಸಿಲೋನಾ ಕ್ರೀಡಾಕೂಟದಲ್ಲಿ ಬೇಸ್‌ಬಾಲ್ ಅನ್ನು ಪದಕ ಸ್ಪರ್ಧೆಯಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರಿಸಲಾಯಿತು. ಆದರೆ 2008ರ ಬೀಜಿಂಗ್ ನಲ್ಲಿ ಮಾತ್ರ ಈ ಕ್ರೀಡೆ ನಡೆದಿತ್ತು. ಆದರೆ ಜಪಾನ್‌ನಲ್ಲಿ ಜನಪ್ರಿಯ ಕ್ರೀಡೆಯಾಗಿರುವ ಬೇಸ್‌ಬಾಲ್ ಮುಂಬರುವ ಟೋಕಿಯೊ ಕ್ರೀಡಾಕೂಟದಲ್ಲಿ ಮರು ಸೇರ್ಪಡೆಗೊಳ್ಳಲು ಸಜ್ಜಾಗಿದೆ. 

ಸಾಫ್ಟ್‌ಬಾಲ್ 1996ರ ಅಟ್ಲಾಂಟಾದಲ್ಲಿ ಪದಕ ಸ್ಪರ್ಧೆಯಾಗಿ ಒಲಿಂಪಿಕ್ಸ್‌ನಲ್ಲಿ ಪಾದಾರ್ಪಣೆ ಮಾಡಿತು. ಇನ್ನು 2008 ರವರೆಗೆ ಕ್ರೀಡಾಕೂಟದ ಭಾಗವಾಗಿತ್ತು. ಇದೀಗ ಬೇಸ್‌ಬಾಲ್‌ನಂತೆ, ಸಾಫ್ಟ್‌ಬಾಲ್ ಟೋಕಿಯೊದಲ್ಲಿ ಒಂದು ಕ್ರೀಡೆಯಾಗಿ ಮರಳುತ್ತಿದೆ. ಆದರೆ 2024ರ ಪ್ಯಾರಿಸ್ ರೋಸ್ಟರ್‌ನಿಂದ ಮತ್ತೆ ಕೈಬಿಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com