ಟೋಕಿಯೊ ಒಲಂಪಿಕ್ಸ್:‌ ಹುಡುಗರ ಹುಚ್ಚೆಬ್ಬಿಸಿದ ಆಟಗಾರ್ತಿ ಲತಿಷಿಯಾ ಬಫೂನಿ ಯಾರು..?

ಒಲಿಂಪಿಕ್ಸ್ 2020 ಉತ್ಸಾಹದಿಂದ ನಡೆಯುತ್ತಿದೆ. ಪ್ರಪಂಚದ ಎಲ್ಲ ದೇಶಗಳ ಕ್ರೀಡಾಪಟುಗಳು ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲ್ಪಟ್ಟಿರುವ ಈ ಕ್ರೀಡೆಗಳಲ್ಲಿ ಪದಕ ಮುಡಿಗೇರಿಸಿಕೊಳ್ಳಬೇಕು...
ಲತಿಷಿಯಾ ಬಫೂನಿ
ಲತಿಷಿಯಾ ಬಫೂನಿ

ಟೋಕಿಯೊ: ಒಲಿಂಪಿಕ್ಸ್ 2020 ಉತ್ಸಾಹದಿಂದ ನಡೆಯುತ್ತಿದೆ. ಪ್ರಪಂಚದ ಎಲ್ಲ ದೇಶಗಳ ಕ್ರೀಡಾಪಟುಗಳು ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲ್ಪಟ್ಟಿರುವ ಈ ಕ್ರೀಡೆಗಳಲ್ಲಿ ಪದಕ ಮುಡಿಗೇರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಆಟಗಾರನ ಬಯಕೆಯಾಗಿದೆ.
ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲು ತೀವ್ರ ಪೈಪೋಟಿ ನಡೆಸಿ ಇಲ್ಲಿಗೆ  ಬಂದಿದ್ದಾರೆ. ಈ ಪಂದ್ಯಗಳನ್ನು ವೀಕ್ಷಿಸಲು ಪ್ರಪಂಚದಾದ್ಯಂತದ  ಕ್ರೀಡಾ ಪ್ರಿಯರು ಹಲವು ದಿನಗಳಿಂದ ಕಾಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಈ ಕ್ರೀಡೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ, ಇದು ಕೇವಲ ಪಂದ್ಯಗಳ   ಕುರಿತು ಮಾತ್ರವಲ್ಲ..  ಆಟಗಾರರು, ಆಟಗಾರ್ತಿಯರ ಬಗ್ಗೆ ಕೂಡ ಭಾರಿ ಚರ್ಚೆ ನಡೆಯುತ್ತಿದೆ.

ವಿಶೇಷವಾಗಿ ಪ್ರಪಂಚದ ವಿವಿಧ ದೇಶಗಳಿಗೆ ಸೇರಿದ ಟ್ವಿಟರ್ ಬಳಕೆದಾರರು, ಒಲಿಂಪಿಕ್ಸ್‌ನಲ್ಲಿ ಓರ್ವ ಆಟಗಾರ್ತಿಯ  ಅಭಿಮಾನಿಗಳಾಗಿದ್ದಾರೆ. ತಮ್ಮ ದೇಶದ ಕ್ರೀಡಾಪಟುಗಳ ಜೊತೆ ಆಕೆಯೂ ಕೂಡ ಗೆಲ್ಲಬೇಕು ಎಂದು  ಬಯಸುತ್ತಿದ್ದಾರೆ.

ಆಕೆ ಯಾರು ಅಲ್ಲ..  ಬ್ರೆಜಿಲ್‌ ದೇಶಕ್ಕೆ ಸೇರಿದ ಸ್ಕೇಟ್‌ ಬೋರ್ಡಿಂಗ್‌ ಆಟಗಾರ್ತಿ ಲತಿಷಿಯಾ ಬಫೂನಿ. ಪ್ರಸ್ತುತ ಇಂಟರ್‌ ನೆಟ್‌ ನಲ್ಲಿ   ಆಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದೆಷ್ಟೋ ಮಂದಿ ಬಫೂನಿ ಎಂದರೆ  ಹುಚ್ಚುಹಿಡಿದವರಂತೆ ಇಷ್ಟಪಡುತ್ತಿದ್ದಾರೆ.

ಈ ಕ್ರೀಡಾಪಟುವಿನ ಅಧಿಕೃತ ಮಾಹಿತಿ ಪ್ರಕಾರ, ಲತಿಷಿಯಾ ವಯಸ್ಸು 28 ವರ್ಷ. ಆಕೆ ಎಕ್ಸ್ ಗೇಮ್ಸ್‌ ನಲ್ಲಿ  ಆರು ಬಾರಿ ಚಿನ್ನದ  ಪದಕ ಗೆದ್ದಿದ್ದಾರೆ. ಅವರು ಎಸ್‌ ಎಲ್‌ ಎಸ್ ಸೂಪರ್ ಕ್ರೌನ್ ಚಾಂಪಿಯನ್‌ಶಿಪ್‌ನ ವಿಜೇತರಾಗಿದ್ದಾರೆ. ಅವರು ವಿಶ್ವದ ಅತ್ಯಂತ ಪ್ರತಿಭಾವಂತ ಸ್ಕೇಟ್‌ಬೋರ್ಡರ್ ಗಳಲ್ಲಿ  ಒಬ್ಬರು. ಆದರೆ  ಲತಿಷಿಯಾ  ಬಫೂನಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಹೇಳಿದರೆ ತಪ್ಪಾಗುತ್ತದೆ.. ಸೌಂದರ್ಯದ ಜೊತೆಗೆ, ಲತಿಷಿಯಾ ಪ್ರತಿಭೆ, ದೃಢ ನಿಶ್ಚಯ ಹಾಗೂ ನಡವಳಿಕೆಯ  ಮೂಲಕ   ಮಾಧ್ಯಮಗಳ ಗಮನ ಸೆಳೆದಿದ್ದು, ಜಗತ್ತಿನ ಹಲವು ದೇಶಗಳಿಗೆ ಸೇರಿದ ಕೋಟ್ಯಾಂತರ ಮಂದಿ ಆಕೆಯ ಅಭಿಮಾನಿಗಳಾಗಿದ್ದಾರೆ.  ವಿವಿಧ ದೇಶಗಳ ಜನರು ತಮ್ಮ ದೇಶದ ಕ್ರೀಡಾಪಟುವಲ್ಲದ ಆಕೆಯನ್ನು ಬೆಂಬಲಿಸಲು ಇದೇ ಕಾರಣ ಎಂದು  ಹೇಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com