ಮ್ಯಾಚ್ ಫಿಕ್ಸಿಂಗ್ ಆರೋಪ: ಪ್ಯಾರೀಸ್ ಪೋಲೀಸರಿಂದ ರಷ್ಯಾ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅರೆಸ್ಟ್

ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರೀಸ್: ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಪೊಲೀಸ್ ಮೂಲ ಮತ್ತು ಫ್ರೆಂಚ್ ಟೆನ್ನಿಸ್ ಸ್ ಫೆಡರೇಶನ್ (ಎಫ್‌ಎಫ್‌ಟಿ) ಆಟಗಾರಳ ಬಂಧಿಸಲಾಗಿದೆ ಎಂದು ಹೇಳಿದೆ,  ಆದರೆ ಕಾರಣಗಳನ್ನು ವಿವರಿಸಲಿಲ್ಲ. ಆದಾಗ್ಯೂ, ಈ ವಿಷಯದ ನೇರ ಮಾಹಿತಿ ಹೊಂದಿರುವ ಮೂಲವು ಈ ಬಂಧನವು ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದೆ ಎಂದು ಹೇಳಿದೆ.

2020ರಸೆಪ್ಟೆಂಬರ್‌ನಲ್ಲಿ, ಫ್ರೆಂಚ್ ಓಪನ್‌ನಲ್ಲಿ ನಡೆದ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕುರಿತು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ತನಿಖೆಯನ್ನು ಪ್ರಾರಂಭಿಸಿದರು. "ಸಂಘಟಿತ ಗುಂಪಿನಲ್ಲಿನ ವಂಚನೆ" ಮತ್ತು "ಸಕ್ರಿಯ ಮತ್ತು ನಿಷ್ಕ್ರಿಯ ಭ್ರಷ್ಟಾಚಾರ" ದ ತನಿಖೆ ರೊಮೇನಿಯನ್ ಜೋಡಿ ಆಂಡ್ರಿಯಾ ಮಿತು ಮತ್ತು ಪೆಟ್ರೀಷಿಯಾ ಮಾರಿ ಮತ್ತು ಸಿಝಿಕೋವಾ ಮತ್ತು ಅಮೇರಿಕನ್ ಮ್ಯಾಡಿಸನ್ ಬ್ರೆಂಗಲ್ ನಡುವಿನ ಡಬಲ್ಸ್ ಪಂದ್ಯಕ್ಕೆ ಸಂಬಂಧಿಸಿದೆ.

ರಷ್ಯಾದ ಟೆನ್ನಿಸ್ ಫೆಡರೇಶನ್‌ನ ಅಧ್ಯಕ್ಷಶಮೀಲ್ ಟಾರ್ಪಿಶೆವ್ , ಸಿಝಿಕೋವಾಬಂಧನದ ಬಗ್ಗೆ ತನಗೆ ತಿಳಿಸಲಾಗಿದ್ದು ಪ್ಯಾರಿಸಿನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಪರಿಸ್ಥಿತಿಯ ಕುರಿತು ತಿಳಿದಿದೆ ಎಂದು ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. "ನಾವು ಯಾವುದೇ ದಾಖಲೆಗಳನ್ನು (ಪ್ರಕರಣಕ್ಕೆ ಸಂಬಂಧಿಸಿದಂತೆ) ಸ್ವೀಕರಿಸಿಲ್ಲ , ಆದ್ದರಿಂದ ಏನಾಯಿತು ಎಂಬುದರ ಬಗ್ಗೆ ವಿವರಿಸುವುದು ಕಷ್ಟ," ಎಂದು ಟಾರ್ಪಿಶೆವ್ ಹೇಳಿದ್ದಾರೆ

ರಷ್ಯಾದ ಟೆನ್ನಿಸ್ ಫೆಡರೇಶನ್ ಪ್ರತಿಕ್ರಿಯೆಯಗೆ ತಕ್ಷಣ ಸ್ಪಂದಿಸಿಲ್ಲ. ಕ್ರೀಡೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ವ್ಯವಹರಿಸುವ ಅಂತರರಾಷ್ಟ್ರೀಯ ಟೆನ್ನಿಸ್ ಸಮಗ್ರತೆ ಸಂಸ್ಥೆ(ಐಟಿಐಎ) ಇದಕ್ಕೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ. ಐಟಿಐಎ ಟೆನಿಸ್ ಆಡಳಿತ ಮಂಡಳಿಗಳು ಸ್ಥಾಪಿಸಿದ ಸ್ವತಂತ್ರ ಸಂಸ್ಥೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com