
ಡಿಂಕೊ ಸಿಂಗ್
ಮುಂಬೈ: ಏಷ್ಯನ್ ಗೇಮ್ಸ್ ಪದಕ ವಿಜೇತ. ಪದ್ಮಶ್ರೀ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.
ಮಣಿಪುರ ಮೂಲದ 42 ವರ್ಷದ ಡಿಂಕೊ ಸಿಂಗ್ ಅವರು ಇತ್ತೀಚೆಗೆ ಕೊರೋನಾಗೆ ತುತ್ತಾಗಿದ್ದರು. ಕೊರೋನಾ ವಿರುದ್ಧ ಗೆದ್ದು ಬಂದಿದ್ದ ಅವರು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಡಿಂಕೊ ಸಿಂಗ್ 2017ರಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದಿದ್ದರು. ಇನ್ನು ಡಿಂಕೊ ನಿಂದಕ್ಕೆ ಕ್ರೀಡಾ ಸಚಿವ ಕಿರಣ್ ರಿಜಿಜು, ಬಾಕ್ಸರ್ ವಿಜೇಂದರ್ ಸಿಂಗ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1998ರ ಏಷ್ಯನ್ ಗೇಮ್ಸ್ ನಲ್ಲಿ ಡಿಂಕೊ ಸಿಂಗ್ ಚಿನ್ನದ ಪದಕ ಗೆದ್ದಿದ್ದರು.