ಸುಶೀಲ್ ಕುಮಾರ್
ಸುಶೀಲ್ ಕುಮಾರ್

ಹತ್ಯೆ ಪ್ರಕರಣ: ಸುಶೀಲ್ ಕುಮಾರ್ ನ್ಯಾಯಾಂಗ ಬಂಧನ ಜೂನ್ 25 ರವರೆಗೆ ವಿಸ್ತರಣೆ

ಛತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಯುವ ಕುಸ್ತಿಪಟು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಜೂನ್ 25 ರವರೆಗೆ ವಿಸ್ತರಿಸಿದೆ.
Published on

ನವದೆಹಲಿ: ಛತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಯುವ ಕುಸ್ತಿಪಟು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಜೂನ್ 25 ರವರೆಗೆ ವಿಸ್ತರಿಸಿದೆ.

10  ದಿನಗಳ ನ್ಯಾಯಾಂಗ ಬಂಧನದ ಕೊನೆಯಲ್ಲಿ ಸುಶೀಲ್ ಕುಮಾರ್ ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರೀತಿಕಾ ಜೈನ್ ಅವರ ಮುಂದೆ ಹಾಜರುಪಡಿಸಲಾಯಿತು.

ಅಂತರರಾಷ್ಟ್ರೀಯ ಕುಸ್ತಿಪಟು ಕೊಲೆ, ನರಹತ್ಯೆ ಮತ್ತು ಅಪಹರಣದ ಆರೋಪ ಎದುರಿಸುತ್ತಿದ್ದಾರೆ. ಆಸ್ತಿ ವಿವಾದದ ಆರೋಪದ ಮೇರೆಗೆ ಅವರು ಮೇ 4 ಮತ್ತು 5 ರ ಮಧ್ಯರಾತ್ರಿಯಲ್ಲಿ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

23 ವರ್ಷದ ಧಂಕರ್ ನಂತರ ಗಾಯಗೊಂಡಿದ್ದಾರೆ. ಕೊಲೆಯ ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್ ಸುಶೀಲ್ ಕುಮಾರ್ ಎಂದು  ಪೊಲೀಸರು ಆರೋಪಿಸಿದ್ದಾರೆ ಮತ್ತು ಅದಕ್ಕೆ ಸೂಕ್ತ ಎಲೆಕ್ಟ್ರಾನಿಕ್ ಪುರಾವೆಗಳಿವೆ, ಅದರಲ್ಲಿ ಅವರು  ಮತ್ತು ಅವರ ಸಹಚರರು ಧಂಕರ್ ಅವರನ್ನು ಹೊಡೆಯುವುದನ್ನು ಕಾಣಬಹುದು. ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ಅವರೊಂದಿಗೆ ಸುಶೀಲ್ ಕುಮಾರ್ ಅವರನ್ನು ಮೇ 23 ರಂದು ಬಂಧಿಸಲಾಯಿತು. ಅವರು ಈಗಾಗಲೇ 10 ದಿನಗಳ ನ್ಯಾಯಾಂಗ  ಕಸ್ಟಡಿ ವಿಚಾರಣೆಗೆ ಒಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 10 ಜನರನ್ನು ಈವರೆಗೆ ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com