ವಿಂಬಲ್ಡನ್, ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದ ರಾಫೆಲ್ ನಡಾಲ್

ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಹಾಗೂ ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದಿರುವುದನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರಾಫೆಲ್ ನಡಾಲ್
ರಾಫೆಲ್ ನಡಾಲ್

ಮ್ಯಾಡ್ರಿಡ್: ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಹಾಗೂ ಟೋಕಿಯೋ ಒಲಂಪಿಕ್ಸ್ ನಿಂದ ಹೊರನಡೆದಿರುವುದನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. 

ತಮ್ಮ ದೇಹಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ ತಾವು ಈ ಎರಡೂ ಟೂರ್ನಮೆಂಟ್ ಗಳನ್ನು ಬಿಡುವುದಕ್ಕೆ ನಿರ್ಧರಿಸಿರುವುದಾಗಿ ರಾಫೆಲ್ ನಾಡಲ್ ತಿಳಿಸಿದ್ದಾರೆ.

ಈ ತಿಂಗಳಲ್ಲಿ ನಡೆದ ಫ್ರೆಂಚ್ ಓಪನ್ ಸೆಮಿಫೈನಲ್ಸ್ ನಲ್ಲಿ ನೋವಾಕ್ ಜೋಕೋವಿಚ್ ಎದುರು ಸೋಲು ಕಂಡಿದ್ದರು. ರಾಫೆಲ್ ನಾಡಲ್ ಎರಡು ಬಾರಿ ವಿಂಬಲ್ಡನ್ ಟೈಟಲ್ ನ್ನು ಗೆದ್ದಿದ್ದು 2008 ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

                               
"ನನ್ನ ವೃತ್ತಿಜೀವನವನ್ನು ಹೆಚ್ಚಿಸುವುದಕ್ಕೆ, ನನಗೆ ಸಂತೋಷವಾಗುವಂತೆ ಇರುವುದಕ್ಕೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ನಾಡಲ್ ತಿಳಿಸಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ಪರ್ಧಿಸುವುದಕ್ಕೆ ಈ ನಿರ್ಧಾರ ಸಹಕಾರಿ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ರೋಲ್ಯಾಂಡ್ ಗ್ಯಾರೋಸ್ ಹಾಗೂ ವಿಂಬಲ್ಡನ್ ನಡುವೆ ಇರುವ ಅಂತರ ಕೇವಲ ಎರಡು ವಾರಗಳಷ್ಟೇ ಆಗಿದ್ದು, ಇದು ದೈಹಿಕ ವಿಶ್ರಾಂತಿಯ ದೃಷ್ಟಿಯಿಂದ ಸುಲಭ ಸಾಧ್ಯವಲ್ಲ ಎಂದು ನಾಡಲ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com