ಕರ್ಣಂ ಮಲ್ಲೇಶ್ವರಿ
ಕರ್ಣಂ ಮಲ್ಲೇಶ್ವರಿ

ದೆಹಲಿ ಕ್ರೀಡಾ ವಿವಿ ಉಪಕುಲಪತಿಯಾಗಿ ಆಯ್ಕೆಯಾದ ಕರ್ಣಂ ಮಲ್ಲೇಶ್ವರಿಗೆ ಆಂಧ್ರ ರಾಜ್ಯಪಾಲರ ಅಭಿನಂದನೆ

ದೆಹಲಿ ಕ್ರೀಡಾ ವಿಶ್ವವಿದ್ಯಾಲಯ(ಡಿಎಸ್‍ಯು) ಉಪಕುಲಪತಿಯಾಗಿ ಆಯ್ಕೆಯಾಗಿರುವ ಒಲಿಂಪಿಕ್ಸ್ ಪದಕ ವಿಜೇತೆ ಮಹಿಳಾ ವೇಟ್‍ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರನ್ನು ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವ ಭೂಷಣ್‍ ಹರಿಚಂದನ್‍ ಅಭಿನಂದಿಸಿದ್ದಾರೆ.

ವಿಜಯವಾಡ: ದೆಹಲಿ ಕ್ರೀಡಾ ವಿಶ್ವವಿದ್ಯಾಲಯ(ಡಿಎಸ್‍ಯು) ಉಪಕುಲಪತಿಯಾಗಿ ಆಯ್ಕೆಯಾಗಿರುವ ಒಲಿಂಪಿಕ್ಸ್ ಪದಕ ವಿಜೇತೆ ಮಹಿಳಾ ವೇಟ್‍ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರನ್ನು ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವ ಭೂಷಣ್‍ ಹರಿಚಂದನ್‍ ಅಭಿನಂದಿಸಿದ್ದಾರೆ.

ಆಮ್‍ ಆದ್ಮಿ ಪಕ್ಷದ ದೆಹಲಿ ಸರ್ಕಾರ ಬುಧವಾರ ಮಲ್ಲೇಶ್ವರಿ ಅವರನ್ನು ಉನ್ನತ ಸ್ಥಾನಕ್ಕೆ ನೇಮಕ ಮಾಡಿತ್ತು.

ಭಾರತದ ಮೊದಲ ಮಹಿಳಾ ಒಲಿಂಪಿಕ್ ಪದಕ ವಿಜೇತೆಯಾದ ಮಲ್ಲೇಶ್ವರಿ ಶ್ರೀಕಾಕುಳಂ ಅಮದಲವಲಸಮಂಡಲದ ವೂಸವಾನಿಪೇಟ ಮೂಲದವರು. ಮಾರುತಿ ಯುವಜನ ವ್ಯಾಯಾಮಾಂಡಲಿಯಲ್ಲಿ ಅವರು ವೇಟ್‌ಲಿಫ್ಟಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಎಸ್‌ಎಎಪಿ ತರಬೇತುದಾರ ನೀಲಾಮ್‌ಸೆಟ್ಟಿ ಅಪ್ಪಣ್ಣ ಅವರ ಅಡಿಯಲ್ಲಿ 12 ವರ್ಷ ವಯಸ್ಸಿನವರಾಗಿದ್ದಾಗ ವೇಟ್‌ಲಿಫ್ಟಿಂಗ್‌ನಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದರು. 1993, 1994, 1995 ಮತ್ತು 1996 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದರು.

ಮಲ್ಲೇಶ್ವರಿ 1997 ರಲ್ಲಿ ವೇಟ್‌ಲಿಫ್ಟರ್ ರಾಜೇಶ್ ತ್ಯಾಗಿ ಅವರನ್ನು ವಿವಾಹವಾದರು. 2002 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅವರು ಯೋಜಿಸಿದ್ದರೂ, ತಂದೆಯ ಮರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಅಥೆನ್ಸ್ 2004 ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾದ ನಂತರ, ಅವರು ನಿವೃತ್ತಿಯನ್ನು ಘೋಷಿಸಿದರು.

2000 ರ ಸಿಡ್ನಿ ಒಲಿಂಪಿ‍ಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸುವುದರ ಮೂಲಕ ಕರ್ಣಂ ಮಲ್ಲೇಶ್ವರಿ ದೇಶದಲ್ಲಿ ಮನೆಮತಾಗಿದ್ದಾರೆ. ವಿಶ್ವ ಚಾಂಪಿಯನ್‍ ಶಿಪ್‍ ಗಳು, ಏಷ್ಯಾ ವೇಟ್ ಲಿಫ್ಟಿಂಗ್ ಚಾಂಪಿಯನ್‍ ಗಳಲ್ಲಿ 11 ಪದಕ ಸೇರಿದಂತೆ 29 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿರುವ ಮತ್ತು ಪ್ರತಿಷ್ಠಿತ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್‍ ರತ್ನ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಕರ್ಣಂ ಮಲ್ಲೇಶ್ವರಿ ದೇಶದ ಕ್ರೀಡಾ ಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.ಅವರು ದೆಹಲಿ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ನೇಮಕಗೊಂಡಿರುವುದು ಆಂಧ್ರಪ್ರದೇಶ ಜನತೆ ಹೆಮ್ಮೆ ಪಡುವ ವಿಷಯವಾಗಿದೆ ಎಂದು ರಾಜ್ಯಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com